ಕಾಸರಗೋಡು: ಅಸ್ಸಾಂನಲ್ಲಿ 40 ಲಕ್ಷ ಮಂದಿಗೆ ನಾಗರಿಕತೆಯನ್ನು ನಿಷೇಧಿಸಿದ ಕ್ರಮ ಫ್ಯಾಶಿಸಂ ಆಗಿದೆ ಎಂದು – ಸಂಸದ ಪಿಕೆ ಕುಂಞಲಿ ಕುಟ್ಟಿ ಹೇಳಿದರು.

ಮುಸ್ಲಿಂ ಲೀಗ್ ರಾಜ್ಯ ಸಮಿತಿಯ ನೇತೃತ್ವದಲ್ಲಿ ಕಾಸರಗೋಡಿನ ಟೌನ್ ಹಾಲಿನಲ್ಲಿ ನಡೆದ ಪಾಣಕ್ಕಾಡ್ ಮುಹಮ್ಮದಲಿ ಶಿಹಾಬ್ ತಂಙಳ್ ಅನುಸ್ಮರಣೆ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತಾಡುತ್ತಿದ್ದರು.

ಈಗ ನಾಗರಿಕತೆ ನಿರಾಕರಿಸಲ್ಪಟ್ಟಿರುವವರೆಲ್ಲರೂ ಭಾರತದಲ್ಲಿ ಹುಟ್ಟಿದವರು. ಇವರಲ್ಲಿ ಮಾಜಿ ರಾಷ್ಟ್ರಪತಿ, ಸೈನಿಕರ ಕುಟುಂಬಗಳು ಸೇರಿವೆ. ಇವರನ್ನು ಹೊರದಬ್ಬಿದರೆ ಸಿಗುವ ರಾಜಕೀಯ ಲಾಭವನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಯಿತು ಎಂದು – ಸಂಸದ ಕುಂಞಲಿ ಕುಟ್ಟಿ ಹೇಳಿದರು.

ಈ ಕುರಿತು ಮಾತಾಡಿದರೆ ನಷ್ಟ ಆಗಬಹುದು ಎಂದು ಭಾವಿಸಿ ಪ್ರತಿಕ್ರಿಯೆ ನೀಡಬೇಕಾದವರೆಲ್ಲ ಮೌನ ಆಚರಿಸುತ್ತಿದ್ದಾರೆ. ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ಹೀಗೆ ಆಗಬಾರದು. ದೇಶದ ಪಾರ್ಲಿಮೆಂಟಿನಲ್ಲಿ ಕೂಡ ಕೋಮುವಾದಿ ಭಾಷಣ ಮಾಡಲು ಸುಲಭವಾದ ಪರಿಸ್ಥಿತಿ ಇಂದಿದೆ. ಲೀಗ್‍ನ ತತ್ವಾಧಾರಿತ ನಿಲುವಿನಿಂದ ದೂರವುಳಿದು ಯಾರಿಗೂ ಏನಾನ್ನಾದರೂ ಮಾತಾಡಲು ಸಾಧ್ಯವಿಲ್ಲ.

ನಮ್ಮ ದಾರಿ ಯಾವುದೆಂದು ಶಿಹಾಬ್ ತಂಙಳ್ ಹೇಳಿಕೊಡುತ್ತಿದ್ದರು. ದಾರಿ ತಪ್ಪಿದಾಗ ಅದು ನಮ್ಮ ದಾರಿಯಲ್ಲ ಎಂದು ತಿಳಿಸಿದರು. ತಂಙಳ್‍ರ ಉಪಸ್ಥಿತಿ ಲೀಗ್‍ಗೆ ಸಾರ್ವಜನಿಕ ಸಮೂಹದಲ್ಲಿ ದೊಡ್ಡ ಸಾಧನೆಯನ್ನೆ ತಂದು ಕೊಟ್ಟಿದೆ ಎಂದು – ಸಂಸದ ಕುಂಞಲಿ ಕುಟ್ಟಿ ಹೇಳಿದರು.

Leave a Reply