ದಿಸ್‍ಪುರ: ಎಟಿಎಮ್ ನೊಳಗೆ ನುಗ್ಗಿದ ಇಲಿಗಳು ಹನ್ನೆರಡು ಲಕ್ಷ ರೂಪಾಯಿಗೂ ಹೆಚ್ಚಿನ ನೋಟುಗಳನ್ನು ತಿಂದು ಹಾಳು ಮಾಡಿದ ಘಟನೆ ಅಸ್ಸಾಮಿನ ಟಿನ್ ಸುಕಿಯಾ ಲೈಪುಲಿ ಪ್ರದೇಶದಲ್ಲಿ ನಡೆದಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎ.ಟಿಎಮ್ ನಲ್ಲಿ ಈ ಘಟನೆ ನಡೆದಿದ್ದು ಮೇ 19ರಂದು ಖಾಸಗಿ ಸೆಕ್ಯೂರಿಟಿ ಏಜೆಂಟರೋರ್ವರು 39.48 ಲಕ್ಷ ರೂಪಾಯಿ ಮೊತ್ತವನ್ನು ಎಟಿಎಮ್ ನಲ್ಲಿ ಸಂಗ್ರಹಿಸಿದ್ದರು. ಮೇ 20ರಂದು ಯಂತ್ರ ಹಾಳಾಗಿತ್ತು.

ಬಳಿಕ ಜೂನ್ 11ರಂದು ಶೇಖರಿಸಿಟ್ಟ ಹಣವನ್ನು ತೆಗೆಯುವಾಗ ಈ ವಿಚಾರ ಬಹಿರಂಗವಾಗಿತ್ತು. ಹೆಚ್ಚಾಗಿ 500 ಹಾಗೂ 2000 ರೂ ಮುಖ ಬೆಲೆಯ ನೋಟುಗಳನ್ನು ಇಲ್ಲಿ ತಿಂದು ಕತ್ತರಿಸಿ ಹಾಕಿತ್ತು. ಪ್ರಕರಣದಲ್ಲಿ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ, ಸುಮಾರು ಹದಿನೇಳು ಲಕ್ಷದಷ್ಟು ಹಣ ಯಾವುದೇ ರೀತಿಯಲ್ಲಿ ಹಾನಿಗೀಡಾಗದೆ ದೊರೆತಿದೆಯೆಂದು ಇಂಡಿಯನ್ ಎಕ್ಸ್ಪ್ರೆಸ್ ತಿಳಿಸಿದೆ. ಮೇ 20 ರಂದು ಹಾಳಾದ ಎಟಿಎಮ್ ದುರಸ್ತಿಗೊಳಿಸಲು ತಡ ಮಾಡಲು ಕಾರಣವೇನು? ಎಂದು ಸ್ಥಳೀಯರು ಕೇಳುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಇಲಿಗಳು ಹಾಳು ಮಾಡಿದ ವೈರಲ್ ಫೋಟೋ ವಿವಿಧ ಫೇಕ್ ಸಂದೇಶಗಳನ್ನು ಹೊತ್ತು ಹರಿದಾಡುತ್ತಿದೆ.

Leave a Reply