ಸೌದಿ ಅರೇಬಿಯ : ಮಾಜಿ ಪ್ರೀಮಿಯರ್ ಲೀಗ್ ರೆಫ್ರಿ ಮಾರ್ಕ್ ಕ್ಲಾಟನ್ಬರ್ಗ್ ಸೌದಿ ಅರೇಬಿಯಾದಲ್ಲಿ ಫುಟ್ಬಾಲ್ ಪಂದ್ಯದ ಮದ್ಯೆ ಮುಸ್ಲಿಮರ ಪ್ರಾರ್ಥನೆಗಾಗಿ ಆಝಾನ್ ಕರೆ ಪ್ರಾರಂಭವಾದಾಗ ಆಝಾನ್ ಮುಗಿಯುವ ತನಕ ಪಂದ್ಯವನ್ನು ನಿಲ್ಲಿಸಿ ಮೌನ ಪಾಲಿಸಿ ಆಝಾನ್ ಗೆ ಗೌರವ ಸೂಚಿಸಿದ್ದಾರೆ. ಅವರ ಈ ನಡತೆಯಿಂದಾಗಿ ಇದೀಗ ರೆಫ್ರಿ ಮಾರ್ಕ್ ಕ್ಲಾಟನ್ಬರ್ಗ್ ಜಗತ್ತಿನಾದ್ಯಂತ ಮುಸ್ಲಿಂ ಫುಟ್ಬಾಲ್ ಅಭಿಮಾನಿಗಳಿಂದ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಾತ್ರವಲ್ಲ ಅವರ ಈ ಸೌಹಾರ್ದ ನಡೆಗಾಗಿ ಇತರರೂ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

ಬುಧವಾರ ಅಲ್ ಫೀಹಾ ಮತ್ತು ಅಲ್-ಫತೇಹ್ ನಡುವೆ ಸೌದಿ ಅರೇಬಿಯಾದ ಕಿಂಗ್ ಸಲ್ಮಾನ್ ಸ್ಪೋರ್ಟ್ ಸಿಟಿ ಕ್ರೀಡಾಂಗಣದಲ್ಲಿ ಪಂದ್ಯಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಪರಿಸರದ ಮಸೀದಿಗಳಿಂದ ಆಝಾನ್ ಧ್ವನಿಸುತ್ತಿದ್ದಾಗ ರೆಫ್ರಿ ಮಾರ್ಕ್ ಕ್ಲಾಟನ್ಬರ್ಗ್ ಪಂದ್ಯವನ್ನು ನಿಲ್ಲಿಸಿ ಗೌರವ ಸೂಚಿಸಿದರು.

ಆಝಾನ್ ಗಾಗಿ 5 ನಿಮಿಷಗಳ ಕಾಲ ಪಂದ್ಯ ಸ್ಥಗಿತಗೊಳಿಸಿದ ಕೊನೆಯಲ್ಲಿ ನಿಗದಿತ ಸಮಯಕ್ಕಿಂತ 5 ನಿಮಿಷ ಹೆಚ್ಚುವರಿ ಸಮಯವನ್ನು ನೀಡಲಾಯಿತು.

ಈ ಪಂದ್ಯವನ್ನು 2-1 ಅಂತರದಲ್ಲಿ ಗೆದ್ದಿರುವ ಅಲ್ ಫೀಹಾ ತಂಡ ಕ್ವಾರ್ಟರ್-ಫೈನಲ್ ಗೆ ಪ್ರವೇಶ ಪಡೆಯಿತು.

Leave a Reply