ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಎರಡು ಕೋಮಿನ ಅಮಾಯಕರಿಬ್ಬರ ಹತ್ಯೆ ನಡೆದಿತ್ತು. ಆದರೆ ಈ ಹತ್ಯೆಯಿಂದ ಹೆತ್ತವರು ಅಮೂಲ್ಯ ಜೀವ ಕಳಕೊಂಡರು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವರಿಗಾಗಿ ನೆರವು ಹರಿದು ಬಂದಿತ್ತು.

ಇದೀಗ ಮತ್ತೊಂದು ಮಾನವೀಯ ಘಟನೆ ನಡೆದಿದೆ. ಅದೇನೆಂದರೆ ಕಾಟಿಪಳ್ಳದಲ್ಲಿ ದೀಪಕ್ ರಾವ್ ಹತ್ಯೆ ನಡೆಯುತ್ತಿದ್ದಾಗ ರಕ್ಷಣೆಗೆ ಧಾವಿಸಿದ್ದ ಅಬ್ದುಲ್ ಮಜೀದ್ ಮತ್ತು ಕೊಟ್ಟಾರಚೌಕಿಯಲ್ಲಿ ಅಬ್ದುಲ್ ಬಶೀರ್ ಅವರನ್ನು ಕೊಚ್ಚಿ ಹಾಕಿದ್ದಾಗ ಆಸ್ಪತ್ರೆಗೆ ದಾಖಲಿಸಿದ್ದ ಶೇಖರ್ ಕುಲಾಲ್ ಅವರಿಗೆ ಗುಲ್ಬರ್ಗದ ವಕೀಲ ಬಿ.ವಿಲಾಸ್ ಕುಮಾರ್ ಎಂಬವರು ತಲಾ 50 ಸಾವಿರ ರೂ. ಕಳುಹಿಸಿಕೊಟ್ಟಿದ್ದಾರೆ. ದುಷ್ಕರ್ಮಿಗಳ ಕೈಯಿಂದ ಹತ್ಯೆಗೆ ಒಳಗಾದ ದೀಪಕ್ ಹಾಗೂ ಬಷೀರ್‌‌ರನ್ನು ರಕ್ಷಿಸಲು ಯತ್ನಿಸಿದ ಇಬ್ಬರಿಗೆ ನಗದು ಬಹುಮಾನ ಕಳುಹಿಸಿದ ಗುಲ್ಬರ್ಗದ ವಕೀಲರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತ ಆಗಿದೆ.

ಮಾತ್ರವಲ್ಲ, ಇಬ್ಬರ ಮಾನವೀಯತೆಗೂ ಶಹಬಾಸ್ ಎಂದಿದ್ದಾರೆ. ಈಗ ಹೇಳಿ ದಕ್ಷಿಣ ಕನ್ನಡ ಜಿಲ್ಲೆಯವರು ಬುದ್ಧಿವಂತರಾ? ಗುಲ್ಬರ್ಗದವರಾ?

Leave a Reply