ಹೆಲ್ಮೆಟ್ ಪ್ರಾಮುಖ್ಯತೆಯ ಬಗ್ಗೆ ದ್ವಿಚಕ್ರವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಹಲವು ವಿಧದಲ್ಲಿ ಪ್ರಯತ್ನ ಮಾಡುತ್ತಿದ್ದಾರೆ.

ಚಾಲನ್ ಗಳನ್ನು ನೀಡಿ ಮತ್ತು ದಂಡಗಳನ್ನು ವಿಧಿಸಿ ಸವಾರರಿಗೆ ಪಾಠವನ್ನು ಕಲಿಸಲು ಪ್ರಯತ್ನಿಸುತ್ತಾರೆ. ಆದರೆ ಇದೀಗಬೆಂಗಳೂರಿನ ಟ್ರಾಫಿಕ್ ಪೊಲೀಸ್ ಒಂದು ಹೆಜ್ಜೆ ಮುಂದಿಟ್ಟಿದ್ದು, ಅವರ ವಿಡಿಯೋ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ಟ್ರಾಫಿಕ್ ಪೋಲೀಸರೋರ್ವರು ಹೆಲ್ಮೆಟ್
ಧರಿಸದೆ ಬೈಕ್ ನಲ್ಲಿ ಸಾಗುತ್ತಿದ್ದ ಇಬ್ಬರಿಗೆ ತನ್ನ ‘ಚಪ್ಪಲ್’ ಎಸೆದಿದ್ದಾರೆ.

ರಿಷಬ್ ಚಟರ್ಜಿ ಎನ್ನುವವರ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು,
ಈ ದೃಶ್ಯ ತಮಾಷೆಗಾಗಿ ಕಂಡು ಬಂದರೂ, ದಂಡ ವಿಧಿಸಬೇಕಾದ ಪೊಲೀಸ್ ಈ ರೀತಿಯಾಗಿ ವರ್ತಿಸುವುದು ಸರಿಯಲ್ಲ ಎನ್ನುವ ಅಭಿಪ್ರಾಯ ಕೇಳಿಬಂದಿದೆ.

ಹೆಲ್ಮೆಟ್ ಧರಿಸದೇ ಡ್ರೈವಿಂಗ್ ಮಾಡಿದ ಪರಿಣಾಮವಾಗಿ ಪ್ರತಿ ವರ್ಷ ಸಾವಿರಾರು ಅಪಘಾತಗಳು ಸಂಭವಿಸಿದೆ‌. 2016 ರ ಅಂಕಿ ಅಂಶಗಳ ಪ್ರಕಾರ, 52,500 ದ್ವಿಚಕ್ರವಾಹನ ಸವಾರರು ರಸ್ತೆ ಅಪಘಾತದಲ್ಲಿ ಜೀವ ತೆತ್ತಿದ್ದಾರೆ. ಅದರಲ್ಲಿ 19.3% ಸವಾರರು ಅಪಘಾತದ ಸಮಯದಲ್ಲಿ ಹೆಲ್ಮೆಟ್ ಧರಿಸಿರಲಿಲ್ಲ.

Leave a Reply