ಬೆಂಗಳೂರು: ತೀವ್ರ ಪೈಪೋಟಿ ಹಾಗೂ ಕುತೂಹಲದ ಬಳಿಕ ಕನ್ನಡ ಬಿಗ್‌ ಬಾಸ್‌ನ ಸೀಸನ್ 5ರ ಫಲಿತಾಂಶ ನಿನ್ನೆ ರಾತ್ರಿ ಹೊರಬಿದ್ದಿದೆ “ರ‌್ಯಾಪ್ ಸಿಂಗರ್” ಚಂದನ್‌ ಶೆಟ್ಟಿ ಜಯಶಾಲಿಯಾಗಿದ್ದಾರೆ. ದೀವಾಕರ್ ದ್ವೀತಿಯ ಸ್ಥಾನ ಪಡೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಚಿತ್ರ ನಟ ಜೆಕೆ ಪರ ಜನರು ಕಾಮೆಂಟ್ ಮಾಡುತ್ತಿದ್ದರು, ಈ ಬಾರಿಯ ವಿನ್ನರ್ ಅವರು ಎಂದೇ ಜನ ಭಾವಿಸಿದ್ದರು‌. ಆದರೆ ಫಲಿತಾಂಶ ಮಾತ್ರ ಒಂದಕ್ಕೊಂದು ಸಂಬಂಧವೇ ಇಲ್ಲ ಎನ್ನುವಂತಿತ್ತು. 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದರು ಅದರಲ್ಲಿ ಇಬ್ಬರನ್ನು ವಿನ್ನರ್ ಹಾಗೂ ರನ್ನರ್ ಆಗಿ ಆಯ್ಕೆ ಮಾಡಲಾಗಿದೆ.

ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದವರು: ಜಯ ಶ್ರೀನಿವಾಸನ್‌ (ಸಂಖ್ಯಾ ಜ್ಯೋತಿಷಿ), ಮೇಘಾ, ದಯಾಳ್ ಪದ್ಮನಾಭ (ನಿರ್ದೇಶಕ) ಸಿಹಿ ಕಹಿ ಚಂದ್ರು (ಹಿರಿಯ ನಟ), ಶ್ರುತಿ, ಅನುಪಮಾ ಗೌಡ (ನಟಿ), ರಿಯಾಜ್‌ ಭಾಷಾ, ನಿವೇದಿತಾ ಗೌಡ, ಸಮೀರ್ ಆಚಾರ್ಯ (ಜ್ಯೋತಿಷಿ), ಕಾರ್ತಿಕ್ ಜಯರಾಮ್‌ (ನಟ), ಆಶಿತಾ ಚಂದ್ರಪ್ಪ, ದೀವಾಕರ್ (ಸೆಲ್ಸ್‌ಮನ್‌ ), ತೇಜಸ್ವಿನಿ ಪ್ರಕಾಶ್‌ (ನಟಿ), ಚಂದನ್‌ ಶೆಟ್ಟಿ (ಹಾಡುಗಾರ), ಸುಮಾ (ಮ್ಯಾಜಿಸಿಯನ್‌), ಕೃಷಿ, ಜಗನ್‌ (ನಟ).

Leave a Reply