ಹಲವು ರೀತಿಯ ದರೋಡೆಯ ಕತೆಗಳನ್ನು ಹೊಂದಿರುವ ಹಲವು ಸಿನಿಮಾಗಳನ್ನು ನೀವು ನೋಡಿರಬಹುದು. ಆದರೆ ಇದು ಸಿನಿಮಾ ಕತೆಯಲ್ಲ, ನಿಮ್ಮನ್ನು ಬೆಚ್ಚಿ ಬೀಳಿಸುವ ಬ್ರಿಟನ್ ಇತಿಹಾಸದ ಅತೀ ದೊಡ್ಡ ದರೋಡೆಯ ಕತೆಯಿದು.

ಫೆಬ್ರವರಿ 22, 2006 ರ ಬೆಳಿಗ್ಗೆ, ಕನಿಷ್ಟ ಆರು ಜನರ ಗ್ಯಾಂಗ್ ಗ್ರೇಟ್ ಬ್ರಿಟನ್ನ ಕೆಂಟ್ನಲ್ಲಿನ ಸೆಕ್ಯುರಿಟಾಸ್ ಬ್ಯಾಂಕ್ ಡಿಪೋದಿಂದ 53 ಮಿಲಿಯನ್ ಪೌಂಡ್ ಲೂಟಿ ಮಾಡುತ್ತಾರೆ.

ಬ್ರಿಟಿಷ್ ಇತಿಹಾಸದಲ್ಲಿ ಇದು ಅತೀ ದೊಡ್ಡ ಕಳ್ಳತನವಾಗಿತ್ತು.

ಬಹಳ ಬುದ್ದಿವಂತಿಕೆಯಿಂದ ಈ ದರೋಡೆಗೆ ಯೋಜನೆಯನ್ನು ರೂಪಿಸಲಾಗಿತ್ತು. ಮೊದಲ ದಿನ ಸಂಜೆಯ ಹೊತ್ತಿಗೆ ಪೋಲಿಸ್ ಅಧಿಕಾರಿಗಳಂತೆ ಬಟ್ಟೆ ಧರಿಸಿದ್ದ ಇಬ್ಬರು ವ್ಯಕ್ತಿಗಳು ಹತ್ತಿರದ ಸ್ಟಾಕ್ಬರಿನಲ್ಲಿ ಡ್ರೈವಿಂಗ್ ಮಾಡುತ್ತಿದ್ದ ಡಿಪೋ ಮ್ಯಾನೇಜರ್, ಕಾಲಿನ್ ಡಿಕ್ಸನ್ರನ್ನು ಅಡ್ಡಗಟ್ಟಿ ನಿಲ್ಲಿಸಿ ತಮ್ಮ ಕಾರನಿಂದ ಹೊರಬರಲು ಹೇಳಿದರು.
ನಂತರ ಅವರನ್ನು ಬಲವಂತವಾಗಿ ತಮ್ಮ ವಾಹನಕ್ಕೆ ಹತ್ತಿಸಿದರು .

ಅದೇ ಸಮಯದಲ್ಲಿ, ಇನ್ನಿಬ್ಬರು ಡಿಕ್ಸನ್ನ ಮನೆಗೆ ಭೇಟಿ ನೀಡಿದರು. ಡಿಕ್ಸನ್ ನ ಪತ್ನಿ ಮತ್ತು ಎಂಟು ವರ್ಷದ ಮಗನನ್ನು ಕಿಡ್ನಾಪ್ ಮಾಡಿದರು. ಅಂತಿಮವಾಗಿ ಡಿಕ್ಸನ್ ಕುಟುಂಬವನ್ನು ವೆಸ್ಟ್ ಕೆಂಟ್ನಲ್ಲಿನ ಒಂದು ಫಾರ್ಮ್ ಗೆ ಕರೆದೊಯ್ಯಲಾಯಿತು.

ಅಲ್ಲಿ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿ ಕೊಲಿನ್ ರನ್ನು ದರೋಡೆಗೆ ಸಹಕಾರ ನೀಡಲು ಒಪ್ಪಿಸಿದರು.

ಮರುದಿನ ಡಿಕ್ಸನ್ಸ್ ತಂಡದೊಂದಿಗೆ ಸೆಕ್ಯುರಿಟಾಸ್ ಡಿಪೋಗೆ ಹೋಗಲು ಒತ್ತಾಯಿಸಲಾಯಿತು, ಅಲ್ಲಿ ಕೋಲಿನ್ ಅವರು ಕಟ್ಟಡದ ಭದ್ರತಾ ವ್ಯವಸ್ಥೆಯನ್ನು ತಪ್ಪಿಸಲು ಸಹಾಯ ಮಾಡಿದರು.

ಗ್ಯಾಂಗ್ 14 ಡಿಪೊಟ್ ಸಿಬ್ಬಂದಿಗಳನ್ನು ಹೆದರಿಸಿ £ 53 ಮಿಲಿಯನ್ ಅನ್ನು ಟ್ರಕ್‌ ಗೆ ಲೋಡ್ ಮಾಡಲಾಯಿತು.

ದರೋಡೆ ಪ್ರಕರಣದಲ್ಲಿ ಯಾರೂ ಗಾಯಗೊಂಡಿರಲಿಲ್ಲ . ಅಂತಿಮವಾಗಿ, ಒಂದು ಡಿಪೋಟ್ ಕಾರ್ಮಿಕನಿಗೆ ಪೊಲೀಸರನ್ನು ಸಂಪರ್ಕಿಸಲು ಸಾಧ್ಯವಾಯಿತು.
ಅವರು ಅಪರಾಧಿಗಳಿಗೆ ಬೃಹತ್ ಹುಡುಕಾಟವನ್ನು ಪ್ರಾರಂಭಿಸಿದರು.

ಅಪಹರಿಸಲ್ಪಟ್ಟ ಹಣವು ಹಳೆ ನೋಟ್ ಆದ ಕಾರಣ ಪತ್ತೆಹಚ್ಚುವುದು ಕಷ್ಟಕರವಾಗಿತ್ತು. ಸೆಕ್ಯುರಿಟಾಸ್ ಮತ್ತು ಅದರ ವಿಮೆಗಾರರು ಕಳ್ಳರ ಬಂಧನಕ್ಕೆ ಸಂಬಂಧಿಸಿದಂತೆ ಮಾಹಿತಿಗಾಗಿ £ 2 ಮಿಲಿಯನ್ ಬಹುಮಾನವನ್ನು ಪ್ರಕಟಿಸಿದರು.

ಮರುದಿನ, ಮೂರು ಜನ, ಒಬ್ಬ ಪುರುಷ ಮತ್ತು ಇಬ್ಬರು ಮಹಿಳೆಯರನ್ನು ಬಂಧಿಸಲಾಯಿತು. ನಂತರ ಮೂರು ಜನರನ್ನು ಆರೋಪ ಸಾಬೀತಾಗದೆ ಬಿಡುಗಡೆ ಮಾಡಲಾಯಿತು.

ಪೊಲೀಸರು ಈ ಪ್ರಕರಣವನ್ನು ತನಿಖೆ ಮುಂದುವರಿಸಿ 30 ಕ್ಕೂ ಹೆಚ್ಚು ಜನರನ್ನು ಬಂಧಿಸಿದರು. ಆದರೆ ಯಾರ ವಿರುದ್ಧವೂ ಆರೋಪ ಸಾಬೀತಾಗಲಿಲ್ಲ.

Leave a Reply