ಸೌದಿ ಅರೇಬಿಯ: ಇಂಡಿಯನ್ ಸೋಶಿಯಲ್ ಫ಼ೋರಂ ಅಭ ಕಮೀಷ್ ಮುಷಯ್ತ್ ಇದರ ಮತ್ತು ಜನರಲ್ ಹಾಸ್ಪಿಟಲ್ ಕಮೀಷ್ ಮುಷಯ್ತ್ ನ ಜಂಟಿ ಸಹಯೋಗದೊಂದಿಗೆ 69 ನೆಯ ಗಣರಾಜ್ಯದ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರವನ್ನು 01 ಫ಼ೆಬ್ರವರಿ 2018 ಏರ್ಪಡಿಸಲಾಗಿತ್ತು. ಇದು ಇಂಡಿಯನ್ ಸೋಶಿಯಲ್ ಫ಼ೋರಂ ನ ಸತತ ಎರಡನೆ ಬಾರಿಯ ರಕ್ತದಾನ ಶಿಬಿರವಾಗಿತ್ತು.

ಅನಿವಾಸಿ ಭಾರತೀಯರ ಆಕಸ್ಮಿಕವಾಗಿ ಸಂಭವಿಸುವ ಅವಘಡ ಮತ್ತು ತುರ್ತು ಸಂದರ್ಭಗಳಲ್ಲಿ ಜನರು ರಕ್ತಕ್ಕಾಗಿ ಪರದಾಡುವುದನ್ನು ತಪ್ಪಿಸಲು ಇಂತಹ ಶಿಬಿರಗಳನ್ನು ನಡೆಸಿ ರಕ್ತ ಸಂಗ್ರಹಿಸಿಡುವುದರಿಂದ ಸಂಕಷ್ಟದಲ್ಲಿರುವವರ ಜೀವ ರಕ್ಷಿಸಲು ಸಹಕಾರಿಯಾಗುತ್ತದೆ.

ಶಿಬಿರವನ್ನು ಬೆಳಗ್ಗೆ 8 ಕ್ಕೆ ಆಸ್ಪತ್ರೆ ನಿರ್ದೇಶಕ ಶ್ರೀ ಅಲಿ ಇಬ್ರಾಹಿಂ ರವರು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಅಪರಾಹ್ನ 3ರವರೆಗೆ ನಡೆದ ಶಿಬಿರದಲ್ಲಿ ಇಂಡಿಯನ್ ಸೋಶಿಯಲ್ ಫ಼ೋರಂ ಸದಸ್ಯರು ಸುಮಾರು 50 ಕ್ಕೂ ಅಧಿಕ ಮಂದಿ ರಕ್ತದಾನಗೈದು ಶಿಬಿರದ ಯಶಸ್ಸಿಗೆ ಸಹಕರಿಸಿದರು.

ಆಸ್ಪತ್ರೆ ನಿರ್ದೇಶಕ ಶ್ರೀ ಅಲಿ ಇಬ್ರಾಹಿಂ ರವರು ಸೌದಿ ಆರೋಗ್ಯ ಸಚಿವಾಲಯದಿಂದ ನೀಡುವ ಪ್ರಶಂಸಾ ಪತ್ರವನ್ನು ಇಂಡಿಯನ್ ಸೋಶಿಯಲ್ ಫ಼ೋರಂ ಅಧ್ಯಕ್ಷರಾದ ಹನೀಫ಼ ಮಂಜೇಶ್ವರ ಕಾರ್ಯದರ್ಶಿ ಮನ್ಸೂರ್, ತನ್ವೀರ್ ರವರಿಗೆ ಹಸ್ತಾಂತರಿಸಿದರು.

ಇಂಡಿಯನ್ ಸೋಶಿಯಲ್ ಫ಼ೋರಂನ ವತಿಯಿಂದ ಆಸ್ಪತ್ರೆ ನಿರ್ದೇಶಕ ಶ್ರೀ ಅಲಿ ಇಬ್ರಾಹಿಂ ಲ್ಯಾಬ್ ನಿರ್ದೇಶಕ ಶ್ರೀ ಫವಾಸ್, ಅಸಿರ್ ಪ್ರದೇಶ ಲ್ಯಾಬ್ ನಿರ್ದೇಶಕ ಶ್ರೀ ಅಬ್ದುಲ್ ಅಜೀಜ್ ರವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

ಸದಸ್ಯರಾದ ತನ್ವೀರ್, ನೂರುದ್ದೀನ್ ಆವಿನಹಳ್ಳಿ, ಅಶ್ರಫ಼್ ಕರ್ಮುಲ, ರಫ಼ೀಕ್ ಪುತ್ತೂರು, ಶಿಬಿರದಲ್ಲಿ ಉಪಸ್ಥಿತರಿದ್ದರು.

 

Leave a Reply