ಫಿಲಿಪೈನ್ಸ್ ನಲ್ಲಿ ಮೂರು ವರ್ಷದ ಪುಟ್ಟ ಬಾಲಕನೊಬ್ಬ ಫ್ರೈಡ್ ಚಿಕನ್ ಪೋಸ್ಟರ್ ಮುಂದೆ ಕೂತು ಚಿಕನ್ ತಿನ್ನುವಂತೆ ಭಾವಿಸುವ ವಿಡಿಯೋ ವೈರಲ್ ಆಗಿದೆ.

ಈ ಬಾಲಕ ತನ್ನ ಹೆತ್ತವರೊಂದಿಗೆ ರೆಸ್ಟೋರೆಂಟ್ ಹೋಗಿದ್ದು, ಆ ಸಮಯದಲ್ಲಿ ರೆಸ್ಟೋರೆಂಟ್ ಮುಚ್ಚಿತ್ತು. ರೆಸ್ಟೋರೆಂಟ್ ತೆರೆಯುವುದನ್ನೇ ಕಾಯುತ್ತಿದ್ದಾಗ, ಈ ಬಾಲಕ ಫ್ರೈಡ್ ಚಿಕನ್ ಪೋಸ್ಟರ್ ಮುಂದೆ ಕೂತು ಚಿಕನ್ ತಿನ್ನುವಂತೆ ಮಾಡುವಾಗ ಹೆತ್ತವರು ವಿಡಿಯೋ ಮಾಡಿದ್ದಾರೆ.

ಹಾರ್ವೆ ಹಾರ್ವೆ ತುಂಬಾ ರುಚಿಕರವಾಗಿದೆಯೇ? ಎಂದು ಕೇಳುವಾಗ ಆತ ತಲೆಯಲ್ಲಾಡಿಸುತ್ತಾನೆ.

ನಂತರ ಆತ ರೆಸ್ಟೋರೆಂಟ್ ಹೋಗಿ ತನ್ನ ಚಿಕನ್‌ ತಿನ್ನುವ ಆಸೆ ಪೂರೈಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕಾರಣ ರೆಸ್ಟೋರೆಂಟ್ ಮಾಲಿಕ ಆ ಪುಟ್ಟ ಬಾಲಕನಿಗೆ ಧಾರಾಳ ಫ್ರೈಡ್ ಚಿಕನ್ ಗಿಫ್ಟ್ ನೀಡಿದ್ದಾರೆ.

 

Leave a Reply