ಹಿಂದೆ ಕೋಳಿ ಮಾಂಸ ತಿನ್ನಬೇಕಾದರೆ ಹಬ್ಬಗಳು ಅಥವಾ ಮನೆಗೆ ನೆಂಟ್ರು ಬರಬೇಕು. ಆಗ ಸಾಕಿದ ಕೋಳಿಯನ್ನು ಸಾರು ಮಾಡಿ ಭೋಜನ ಕೊಡುತ್ತಿದ್ದರು. ಆದರೆ ಈಗ ಎಲ್ಲೆಂದರಲ್ಲಿ ಬಾಯ್ಲರ್ ಕೋಳಿ..

ಭಾರತದಲ್ಲಿ ಉತ್ಪಾದನೆಯಾಗುವ ಕೋಳಿಗಳಿಗೆ ವಿಶ್ವದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಪ್ರಬಲ ರೋಗನಿರೋಧಕ ಔಷಧಗಳನ್ನು ನೀಡಲಾಗುತ್ತಿದೆ ಎಂದು ಅಧ್ಯಯನ ಬಹಿರಂಗ ಪಡಿಸಿದೆ‌.

ಈ ಕುರಿತು ‘ದಿ ಗಾರ್ಡಿನ್‌’ ವರದಿ ಮಾಡಿದ ಪ್ರಕಾರ, ಕೋಳಿಗಳಿಗೆ ನೀಡುವ ಔಷಧವು ವಿದೇಶಗಳಿಗೆ ರಫ್ತಾಗುವ ಕೋಳಿಗಳ ಮೂಲಕ ಜಗತ್ತಿನಾದ್ಯಂತ ಹರಡುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ನಿಜವಾಗಿ ಕೋಳಿಗಳಿಗೆ ಅನಾರೋಗ್ಯ ಕಾಣಿಸಿಕೊಂಡಾಗ ಮಾತ್ರ ಔಷಧ ನೀಡಬೇಕು. ಆದರೆ, ಇಲ್ಲಿ ಅನಾರೋಗ್ಯ ಕಾಣಿಸಿಕೊಳ್ಳುವ ಮೊದಲೇ ನೀಡಲಾಗುತ್ತಿದೆ. ಭಾರತದಲ್ಲಿ ನೂರಾರು ಟನ್ ಗಟ್ಟಲೆ ರೋಗ ನಿರೋಧಕಗಳನ್ನು ರೋಗ ಇಲ್ಲದಿದ್ದರೂ, ಮಾತ್ರವಲ್ಲ ವೈದ್ಯರ ಸಲಹೆಯ ಇಲ್ಲದೆಯೂ ಕೊಡಲಾಗುತ್ತದೆ ಎಂಬ ಆಘಾತಕಾರಿ ಅಂಶಗಳನ್ನು ವರದಿಯಲ್ಲಿ ತಿಳಿಸಲಾಗಿದೆ.

ಇದರಿಂದ ಆ ಜೀವಿಗಳಿಗೂ ತಿನ್ನುವ ಮನುಷ್ಯರಿಗೂ ಅಪಾಯ ಇದೆ ಎಂದು ಹೇಳಲಾಗಿದೆ.

Leave a Reply