ನವದೆಹಲಿ: ಈ ಬಾರಿಯ ಬಜೆಟ್ ಮಂಡನೆಯಾಗಿದೆ. ಈ ಬಜೆಟ್ ಅನ್ನು ಮೋದಿಯವರು ಜನಪರ ಯೋಜನೆ ಎಂದು ಕೊಂಡಾಡಿದ್ದಾರೆ.

ಮೊಬೈಲ್‌ ಫೋನ್‌, ಕಾರು, ಬೈಕ್ ಮತ್ತಿತರ ಆಮದಾಗುವ ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಬಜೆಟ್‌ನಲ್ಲಿ ಹೆಚ್ಚಳ ಮಾಡಲಾಗಿರುವುದರಿಂದ ಈ ವಸ್ತುಗಳ ಬೆಲೆ ಏರಲಿದೆ. ಮೊಬೈಲ್‌ ಫೋನ್ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 15ರಿಂದ 20ಕ್ಕೆ ಏರಿಕೆ ಮಾಡಲಾಗಿದೆ.

ಮೊಬೈಲ್‌ ಫೋನ್, ಟಿ.ವಿ, ವಾಚ್, ಪಾದರಕ್ಷೆ, ಕಾರು, ಬೈಕ್‌, ಚಿನ್ನ, ಬೆಳ್ಳಿ, ತರಕಾರಿ, ಹಣ್ಣಿನ ಜ್ಯೂಸ್, ಸಿಗರೆಟ್, ಸನ್‌ಗ್ಲಾಸ್‌, ಪರ್‌ಫ್ಯೂಮ್‌, ಶೇವಿಂಗ್ ಕಿಟ್, ಸೌಂದರ್ಯ ವರ್ಧಕ ಸಾಧನಗಳು, ಟ್ರಕ್‌, ಬಸ್‌ನ ಚಕ್ರಗಳು, ಕ್ರೀಡಾ ಸಾಮಗ್ರಿಗಳು, ಖಾದ್ಯ ತೈಲ, ಆಟಿಕೆ, ಬೊಂಬೆಗಳು, ವಜ್ರ, ಅಲಂಕಾರಿಕ ಆಭರಣಗಳು, ಸನ್‌ಸ್ಕ್ರೀನ್, ಡಿಯೊಡ್ರಂಟ್, ರೇಷ್ಮೆ ಬಟ್ಟೆ ತಂಬಾಕು ಉತ್ಫನ್ನಗಳು, ಅಲ್ಯೂಮೀನಿಯಂ ಅದಿರು ಬೆಳ್ಳಿ ನಾಣ್ಯಮುಂತಾದವುಗಳು ದುಬಾರಿಯಾಗಲಿದೆ.

ಹಾಗೆಯೇ ಕಚ್ಚಾ ಗೋಡಂಬಿ, ಸೌರ ಫಲಕ ತಯಾರಿಸಲು ಬಳಸುವ ಗಾಜು, ಶ್ರವಣ ಸಾಧನ ತಯಾರಿಗೆ ಬಳಸುವ ಕಚ್ಚಾ ವಸ್ತುಗಳು, ದುರಸ್ತಿ ಕೆಲಸಗಳಲ್ಲಿ ಉಪಯೋಗಿಸುವ ಎಲೆಕ್ಟ್ರಾನಿಕ್ ವಸ್ತುಗಳು, ಬಂಡವಾಳ ಸರಕುಗಳು, ಆನ್’ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್, ಸೋಲಾರ್ ಘಟಕದಲ್ಲಿ ಬಳಸುವ ಸೋಲಾರ್ ಟೆಂಪರ್ಡ್ ಗ್ಲಾಸ್, ರಕ್ಷಣಾ ಸೇವೆಗಳ ಗುಂಪು ವಿಮೆ, ಗೃಹ ಬಳಕೆಯ RO ಮೆಂಬ್ರೇನ್ ವಸ್ತುಗಳು ಮುಂತಾದವುಗಳ ಬೆಲೆ ಅಗ್ಗವಾಗಲಿದೆ.

Leave a Reply