ರೈಲ್ವೆ ಕ್ಯಾಂಟೀನ್ ಸ್ವಚ್ಛತೆಯ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಾ ಇರುತ್ತದೆ. ಇದೀಗ ರೈಲಿನಲ್ಲಿ ಚಹಾ ಮಾರುವ ವ್ಯಕ್ತಿಯ ವಿಡಿಯೋವೊಂದು ವೈರಲ್ ಆಗಿದೆ.

ವಿಡಿಯೊದಲ್ಲಿ ಕಾಣುವಂತೆ ನೀಲಿ ಟಿ-ಶರ್ಟ್ ಧರಿಸಿದ ವ್ಯಕ್ತಿ ರೈಲಿನ ವೆಸ್ಟರ್ನ್ ಶೌಚಾಲಯದ ಹೊರಗೆ ನಿಂತು ಕಾಯುತ್ತಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆ ಕೈಯಲ್ಲಿ ಚಹಾ ಕಿಟ್ಲಿ ಹಿಡಿದು ಹಸ್ತಾಂತರ ಮಾಡುವುದು ಕಾಣುತ್ತದೆ. ತೆಲಂಗಾಣ ಅಥವಾ ಆಂಧ್ರಪ್ರದೇಶದ ಗಡಿಯಲ್ಲಿ ರೈಲಿನಲ್ಲಿ ಈ ಘಟನೆ ನಡೆದಿದೆ ಎಂದು ಎಬಿಪಿ ಲೈವ್ ವರದಿ ಮಾಡಿದೆ.

ವೀಡಿಯೊದ ಕೊನೆಯಲ್ಲಿ, ಘಟನೆಯ ಬಗ್ಗೆ ವೀಡಿಯೊ ಮಾಡುವ ವ್ಯಕ್ತಿಯು ಅವರನ್ನು ಎದುರುಗೊಳ್ಳುತ್ತಾನೆ. ಕೊಳಕು ನೀರು ತುಂಬಿರುವುದನ್ನು ನೋಡಬಹುದಾಗಿದೆ.

ಈ ವೈರಲ್ ವೀಡಿಯೋ ಟ್ವಿಟರ್ ನಲ್ಲಿ ಸಂಚಲನ ಮೂಡಿಸಿದ್ದು, ರೈಲ್ವೆ ಕ್ಯಾಂಟೀನ್ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ.

Leave a Reply