ಹೈದ್ರಾಬಾದಿ ದಮ್ ಚಾಯ್, ಕಟ್ಟಿಂಗ್ ಚಾಯ್, ಮಸಾಲಾ ಚಾಯ್, ಜಿಂಜರ್ ಚಾಯ್, ಸಾಫ್ರೋನ್ ಚಾಯ್, ಕೋಫೀ, ಸುಲೈಮಾನಿ ಟೀ, ಲೈಮ್ ಟೀ, ಮಿಂಟ್ ಟೀ, ಗ್ರೀನ್ ಹನೀ… ಹೀಗೇ ನಾನಾ ತರಹದ ಬಿಸಿಬಿಸಿ ವೈವಿಧ್ಯಮಯ ಚಹಾ ಈಗ ಮಂಗಳೂರಿನಲ್ಲಿದೆ.

ಮಂಗಳೂರು ಸಮೀಪದ ಕಣ್ಣೂರು ನಿವಾಸಿ ಅನೀಸ್ ಎಂಬ ಯುವಕ ಅತ್ತಾವರದ ಕಸಾ ಗ್ರಾಂಡೆ ಮಾಲ್ ಕಾಂಪ್ಲೆಕ್ಸ್ ನಲ್ಲಿ “ಚಾಚಾ ಚಾಯ್’ವಾಲಾ” ಎಂಬ ಹೊಸ ಕಲ್ಪನೆಯ ಚಹಾ ಅಂಗಡಿ ಪ್ರಾರಂಭಿಸಿದ್ದಾರೆ. ಹೈದ್ರಾಬಾದಿನ ಬಾಣಸಿಗ ಇಲ್ಲಿ ಅಭಿರುಚಿಗೆ ತಕ್ಕಂತೆ ಸ್ವಾಧವಾದ ಚಹಾ ತಯಾರಿಸಿ ಕೊಡುತ್ತಾರೆ.

ಚಹಾಗೆ ಹೊಂದಾಣಿಕೆಯಾಗುವ ಒಸ್ಮಾನಿಯಾ ಬಿಸ್ಕೆಟ್, ಬನ್ ಮಸ್ಕಾ, ಬನಾನಾ ಕೇಕ್, ಕೊಕೋನಟ್ ಕೇಕ್, ವಿವಿಧ ತರಹದ ಸಮೋಸ, ಕಟ್ಲೆಟ್ಸ್, ಸ್ಪ್ರಿಂಗ್ ರೋಲ್, ಚಟ್ಟಿ ಚಿಕ್ಕನ್ “ಚಾಚಾ ಚಾಯ್’ವಾಲಾ” ವಿಶೇಷತೆ.

ನಿಮ್ಮ ಟೆನ್ಶನ್ ಕಳೆಯಲು, ರಿಲ್ಯಾಕ್ಸ್ ಆಗಲು, ಒಂದಷ್ಟು ಟೈಮ್ ಪಾಸ್ ನೊಂದಿಗೆ ವಿಭಿನ್ನ ಸ್ವಾಧವನ್ನು ಅನುಭವಿಸಲು “ಚಾಚಾ ಚಾಯ್’ವಾಲಾ” ಉತ್ತಮ ಆಯ್ಕೆ. ನಿರೀಕ್ಷೆಗೂ ಮೀರಿದ ಜನರ ಸ್ಪಂದನೆ ಮಾಲಕ ಅನೀಸ್ ಗೆ ಖುಷಿ ನೀಡಿದೆ.
-ರಶೀದ್ ವಿಟ್ಲ.

Leave a Reply