ಬೋಪಾಲ್: ಮದ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬಾಷಣದಲ್ಲಿನ ಮಾತುಗಳು ರಾಜಕೀಯ ವಲಯದಲ್ಲಿ ಬಾರೀ ಚರ್ಚೆಗೊಳಗಾಗಿವೆ.

“ನಾನು ಈ ಚಟುವಟಿಕೆಯಿಂದ ದೂರವಿರಲು ಬಯಸುತ್ತಿದ್ದೇನೆ. ಮುಖ್ಯಮಂತ್ರಿ ಹುದ್ದೆ ಖಾಲಿಯಿದೆ. ಅದಕ್ಕೆ ಮುಂದೆ ಯಾರಾದರೂ ಬರಬಹುದು ಎಂದು ಮುಖ್ಯಮಂತ್ರಿಗಳ ಆಸನವನ್ನು ತೋರಿಸಿ ಶಿವರಾಜ್ ಸಿಂಗ್ ಚೌಹಾಣ್ ಹೆಳಿದಾಗ ಎಲ್ಲರಲ್ಲಿ ಆತಂಕ ಆಶ್ಚರ್ಯ ಮೂಡಿದೆ.

ದೆಹಲಿಯಲ್ಲಿ ಬಿಜೆಪಿ ಮುಖ್ಯಮಂತ್ರಿಗಳ ಸಭೆಯಿಂದ ಮರಳುವಾಗ ಈ ಮಾತು ಹೇಳಿದ್ದು ಗಮನಾರ್ಹ. ಶುಕ್ರವಾರ ಅಮಿತ್ ಶಾ ಜೊತೆ ಬೇಟಿಯ ವ್ಯವಸ್ಥೆಯನ್ನೂ ಮಾಡಲಾಗಿದೆ.
ಚುನಾವಣೆ ಆಸನ್ನವಾಗಿರುವಾಗ ಇಂತಹ ಬದಲಾವಣೆ ಸಾಧ್ಯವಿಲ್ಲವೆಂದು ಪಕ್ಷದ ಅದ್ಯಕ್ಷ ರಾಕೇಶ್ ಸಿಂಗ್ ಮತ್ತು ಕಾರ್ಯದರ್ಶಿ ಕೈಲಾಶ್ ವಿಜಯವಾರ್ಜ್ ಇದನ್ನು ತಳ್ಳಿ ಹಾಕಿದ್ದಾರೆ. ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸುವ ಕಾಲ ಬಂದಿದೆಯೆನ್ನುವುದನ್ನು ಇದು ಸೂಚಿಸುತ್ತದೆಯೆಂದು ಪಿ.ಸಿ.ಸಿ ಅಧ್ಯಕ್ಷ ಕಮಲ್ ನಾಥ್ ಪ್ರತಿಕ್ರಿಯಿಸಿದ್ದಾರೆ. ಮಧ್ಯ ಪ್ರದೇಶದ ಮತದಾರರು ಅವರನ್ನು ಕಿತ್ತೊಗೆಯಲಿದ್ದಾರೆ ಎಂದೂ ಅವರು ಹೇಳಿದರು. ಒಂದೋ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವರು ಎಂದೋ ಅಥವಾ ಮುಂದೆ ಕಾಂಗ್ರೆಸ್ ಮರಳಿ ಅಧಿಕಾರಕ್ಕೇರಬಹುದೆಂಬ ಚಿಂತೆ ಕಾರಣವಾಗಿರಬಹುದಂದು ವಿರೋಧ ಪಕ್ಷದ ನಾಯಕ ಅಜಯ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ

Leave a Reply