ಹೊಸದಿಲ್ಲಿ: ರಫೇಲ್ ಹಗರಣದ ಬಳಿಕ ಬಿಜೆಪಿಯ 29,000 ಕೋಟಿ ರೂಪಾಯಿಯ ಕಲ್ಲಿದ್ದಲ್ಲು ಹಗರಣವನ್ನು ಕಾಂಗ್ರೆಸ್ ಬಯಲುಗೊಳಿಸಿದೆ. ರಫೇಲ್ ಒಪ್ಪಂದದಲ್ಲಿ ಅವ್ಯವಹಾರವಾಗಿಲ್ಲ ಎಂದು ಬಿಜೆಪಿ ವಾದಿಸುತ್ತಿರುವ ವೇಳೆಗೆ ಕಲ್ಲಿದ್ದಲು ಆಮದಿನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ಸಿನ ಹಿರಿಯ ನೇತಾರ ಜಯರಾಂ ರಮೇಶ್ ಅಪಾದಿಸಿದ್ದಾರೆ. ಕಲ್ಲಿದ್ದಲಿನಲ್ಲಿ ಅವ್ಯವಹಾರ ನಡೆದಿದ್ದು, ಅದಾನಿ, ರಿಲಯನ್ಸ್ ಸಹಿತ 40 ಖಾಸಗಿ ಇಂಧನ ಕಂಪೆನಿಗಳ ವಿರುದ್ಧ ಎಸ್‍ಐಟಿ ತನಿಖೆ ನಡೆಸಬೇಕೆಂದು ಜೈರಾಂ ರಮೇಶ್ ಆಗ್ರಹಿಸಿದ್ದಾರೆ.

ಇಂಡೋನೇಶಿಯದಿಂದ ಕಲ್ಲಿದ್ದಲು ತರಿಸಿಕೊಂಡು ಮೂಲಬೆಲೆಯನ್ನು ಹೆಚ್ಚಿಸಿ ತೋರಿಸಿ 29,000ರೂಪಾಯಿ ಕೋಟಿ ರೂಪಾಯಿಯ ಅವ್ಯವಹಾರ ಎಸಗಲಾಗಿದೆ. ಈ ವಂಚನೆಯನ್ನು ರೆವನ್ಯೂ ಇಂಟಲಿಜೆನ್ಸ್ ಡೈರಕ್ಟರೇಟ್ ಕಂಡು ಹಿಡಿದರೂ ತನಿಖೆಯನ್ನು ಬುಡಮೇಲು ಗೊಳಿಸಲು ಯತ್ನ ನಡೆಯುತ್ತಿದೆ. ಪ್ರಧಾನಿಯಪ್ರಿಯ ಉದ್ಯಮಿಗಳು ಗೌತಂ ಅಂಬಾನಿ, ಅನಿಲ್ ಅಂಬಾನಿ, ಎಸ್ಸಾರ್ ಗೋಲ್‍ಮಾಲ್‍ನಲ್ಲಿ ಒಳಗೊಂಡಿದೆ. ಶೇ.70ರಷ್ಟು ಕಲ್ಲಿದ್ದಲ್ಲನ್ನು ಅದಾನಿ ಗ್ರೂಪ್ ತರಿಸಿಕೊಂಡಿತ್ತು.ಆದರೆ ಆರೋಪಗಳಿಗೆ ಉತ್ತರಿಸಲು ಅದಾನಿ ಗುಂಪು ಸಿದ್ಧವಾಗಿಲ್ಲ.

2014 ಅಕ್ಟೋಬರ್‍ನಲ್ಲಿ ಡಿಆರ್‍ಡಿ ತನಿಖೆ ಆರಂಭವಾಗಿತ್ತು. ಹಲವು ವರ್ಷ ಆಗಿಯೂ ತನಿಖೆ ಪ್ರಗತಿ ಕಂಡಿಲ್ಲ. ಸಿಂಗಾಪೂರದ ಸ್ಟೇಟ್ ಬ್ಯಾಂಕ್ ಇಂಡಿಯದ ಶಾಖೆಯ ಮೂಲಕ ವ್ಯವಹಾರಗಲೂ ನಡೆದಿವೆ. ಅಧರೆ, ಇದರ ವಿವರಗಳು ಹಸ್ತಾಂತರಿಸಲು ಬ್ಯಾಂಕ್ ತಯಾರಾಗಿಲ್ಲ. ಈ ನಡುವೆ ಮೂರು ಬಾರಿ ಸಿಂಗಾಪೂರ್ ಸಂದರ್ಶಿಸಿದ ಪ್ರಧಾನಿ ನರೇಂದ್ರ ಮೋದಿ ವಿವರಗಳನ್ನು ಲಭ್ಯಗೊಳಿಸಲು ಯಾವ ಕ್ರಮಕ್ಕೂ ಮುಂದಾಗಿಲ್ಲ. ರಾಬರ್ಟ್ ವಾದ್ರಾರ ಪ್ರಕರಣವನ್ನು ಪುನಃ ಧೂಳು ಕೊಡವಿ ಹೊರಗೆ ತರಲು ಯತ್ನಿಸುತ್ತಿರುವಾಗ ಕಾಂಗ್ರೆಸ್ ಬಿಜೆಪಿಯ ಇನ್ನೊಂದು ಹಗರಣವನ್ನು ದೇಶದ ಮುಂದಿಟ್ಟಿದೆ.

Leave a Reply