ಮಂಬೈ: “ಹತ್ತುವರ್ಷದ ನನ್ನ ಮಗಳನ್ನು ಅತ್ಯಾಚಾರ ಮಾಡುವುದಾಗಿ ನನಗೆ ಟ್ವೀಟರ್ ಮೂಲಕ ಬೆದರಿಕೆ ಬಂದಿದೆ” ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಚತುರ್ವೇದಿ ದೂರು ನೀಡಿದ್ದಾರೆ.

ಪ್ರತೀ ದಿನ ನಾನು ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆಗೆ ಗುರಿಯಾಗುತ್ತಿದ್ದೇನೆ. ಆದರೆ ಒರ್ವ ನನ್ನ ಮಗಳನ್ನು ಅತ್ಯಾಚಾರ ಮಾಡುವ ಬೆದರಿಕೆ ಹಾಕಿರುವುದನ್ನು ನೋಡಿದೆ. ಇಂತಹವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಾರದೆಂದು ಪೋಲೀಸರಿಗೆ ದೂರು ನೀಡಿದ್ದೇನೆ ಎಂದು ಹೇಳಿದರು.

ಗಿರೀಶ್.ಕೆ ಎಂಬ ಹೆಸರಿನ ವ್ಯಕ್ತಿಯ ಟ್ವಿಟರ್ ಖಾತೆಯಿಂದ ನನ್ನ ಮಗಳ ವಿರುದ್ಧ ಅತ್ಯಾಚಾರದ ಬೆದರಿಕೆ ಬಂದಿರುವುದನ್ನು ಖಾತೆಯ ವಿಳಾಸದ ಸಹಿತ ಪ್ರಿಯಾಂಕ ಟ್ವೀಟ್ ಮಾಡಿದ್ದರು. ಅತ್ಯಾಚಾರ ಬೆದರಿಕೆಯ ಟ್ವೀಟ್ ಅನ್ನು ಈಗ ಅಳಿಸಲಾಗಿದೆ

Leave a Reply