ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಒಂದು ಮನಮಿಡಿಯುವ ಘಟನೆ ನಡೆದಿದೆ. ಗಾಯದ ಸಮಸ್ಯೆಯಿಂದ ನಿತ್ರಾಣಗೊಂಡು ಬಳಲುತ್ತಿದ್ದ ಕರುವನ್ನುವಾಹನದಲ್ಲಿ ಪಶು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆ ವೇಳೆ ವೇಳೆ ತಾಯಿ ಹಸು ಆಸ್ಪತ್ರೆವರೆಗೂ ವಾಹನವನ್ನು ಹಿಂಬಾಲಿಸಿ ಓಡೋಡಿ ಬಂದಿರುವ ವಿಡಿಯೋ ನೋಡುವಾಗ ಮನ ಮಿಡಿಯುತ್ತದೆ. .

ಹಾವೇರಿ ನಗರದ ಜೆ.ಪಿ.ವೃತ್ತದ ಬಳಿ ಬೀದಿ ಹಸುವಿನ ಕರುವೊಂದು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಅನಾರೋಗ್ಯದಿಂದ ಅಸ್ವಸ್ಥವಾಗಿದ್ದ ಕರುವನ್ನು ಸ್ಥಳೀಯರು ಚಿಕಿತ್ಸೆಗಾಗಿ ಪಶು ಆಸ್ಪತ್ರೆಗೆ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಕರುವಿಗೆ ಚಿಕಿತ್ಸೆ ನೀಡುವವರೆಗೂ ತಾಯಿ ಹಸು ಮಾತ್ರ ಆಸ್ಪತ್ರೆಯ ಎದುರುಗಡೆಯೇ ನಿಂತಿದ್ದು , ವೈದ್ಯರ ಚಿಕಿತ್ಸೆ ನಂತರ ಕರುವನ್ನು ಹಾಲುಣಿಸು ಮುದ್ದಿಸಿದೆ. ತಾಯಿಯ ಪ್ರೀತಿಗಿಂತ ಮಿಗಿಲು ಯಾವುದೂ ಇಲ್ಲ. ಅದು ಮನುಷ್ಯರಾಗಲಿ ಅಥವಾ ಪ್ರಾಣಿಗಳಾಗಲಿ ಅಲ್ವೇ?

video news courtesy : Public Tv

Leave a Reply