ಮಧ್ಯಪ್ರದೇಶ: ಒಂದನೇ ತರಗತಿಯ ಪುಟ್ಟ ಬಾಲಕನೊಬ್ಬ ಊಟದ ಬಟ್ಟಲಿಗೆ ದಾಲ್ ಹಾಕಿದಾಗ ಇನ್ನೂ ಬೇಕು ಎಂದು ಎರಡನೇ ಕೇಳಿದಾಗ ಬಿಸಿ ಬಿಸಿ ಪದಾರ್ಥ ದಾಲ್(ತೊಗರಿಬೇಳೆ ಸಾಂಬಾರ್)ನ್ನು ಕೆಲಸದಾಕೆ ಬಾಲಕನ ಮುಖದ ಮೇಲೆ ಸುರಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಬಿಸಿ,ಬಿಸಿ ದಾಲ್ ಸಾಂಬಾರ್ ಬಾಲಕನ ಮುಖದ ಮೇಲೆ ಸುರಿದ ಪರಿಣಾಮ ಮುಖ, ಕೆನ್ನೆ, ಎದೆ ಹಾಗೂ ಹಿಂಭಾಗ ಸುಟ್ಟು ಹೋಗಿದ್ದು, ಪ್ರಿನ್ಸ್ ಮೆಹ್ರಾ ಎಂಬ 1ನೇ ತರಗತಿ ವಿದ್ಯಾರ್ಥಿಯನ್ನು ಭೋಪಾಲ್ ನಿಂದ 480 ಕಿಮೀ ದೂರದಲ್ಲಿರುವ ಡಿನ್ ಡೋರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಮಧ್ಯಾಹ್ನದ ಊಟದ ವೇಳೆ ಡಿನ್ ಡೋಂರಿ ಪ್ರಾಥಮಿಕ ಶಾಲೆಯಲ್ಲಿ ಪ್ರಿನ್ಸ್ ಮೆಹ್ರಾ 2ನೇ ಬಾರಿ ದಾಲ್ ಹಾಕುವಂತೆ ಕೇಳಿದ್ದ. ಇದರಿಂದ ಕುಪಿತಗೊಂಡ ಕೆಲಸದಾಕೆ ನೆಮಾವತಿ ಬಾಯ್, ಆತನ ಮುಖದ ಮೇಲೆ ಬಿಸಿ ದಾಲ್ ಸುರಿದಿರುವುದಾಗಿ ಬಾಲಕನ ಅಜ್ಜಿ ಆರೋಪಿಸಿದ್ದಾರೆ.ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply