ರಸ್ತೆ ಸುರಕ್ಷತಾ ವಾರದ ಭಾಗವಾಗಿ ದೆಹಲಿ ಪೊಲೀಸ್ ಆಯುಕ್ತ ಅಮುಲ್ ಪಟ್ನಾಯಕ್ ಅವರು ಸೋಮವಾರ “ಟ್ರಾಫಿಕ್ ಸೆಂಟಿನೆಲ್ ಸ್ಕೀಮ್” ಅನ್ನು ಪ್ರಾರಂಭಿಸಿದಾಗ ಟ್ರಾಫಿಕ್ ನಿಯಂತ್ರಿಸಲು ಸ್ವಯಂ ಸೇವಕರಾಗಿ ನೂರಾರು ಮಂದಿ ಮುಂದೆ ಬಂದಿದ್ದಾರೆ.

ಈ ಸ್ವಯಂ ಸೇವಕರು ಟ್ರಾಫಿಕ್ ಪೋಲಿಸರಿಗೆ ಸಹಾಯ ಮಾಡಲು ಸ್ವಯಂಪ್ರೇರಿತವಾಗಿ ಮುಂದೆ ಬಂದವರಾಗಿದ್ದಾರೆ. ಈ ಸೇವೆಯನ್ನು ಕೈಗೊಳ್ಳಲು ಸುಮಾರು 319 ನೇಮಿಸಲಾಗಿದೆ.

ವಿಶೇಷವೆಂದರೆ ಈ ಟ್ರಾಫಿಕ್ ಸೇವಕರಲ್ಲಿ ಈಶಾನ್ಯ ದೆಹಲಿಯ ಸೀಲಾಂಪುರ್ ನಿವಾಸಿಯಾಗಿರುವ 72 ಹರೆಯದ ಗಂಗಾ ರಾಮ್ ಒಬ್ಬರು. ಅವರು ಹೀಗೆ ಸೇವೆಗೆ ಮುಂದೆ ಬರಲು ಬಲವಾದ ಕಾರಣವಿದೆ. ಜೀವನದ ಮುಸ್ಸಂಜೆಯಲ್ಲಿ ಟ್ರಾಫಿಕ್ ಸೇವೆ ಮಾಡುವುದರ ಹಿಂದೆ ಒಂದು ನೋವಿನ ಹಿನ್ನೆಲೆಯಿದೆ.

ಮೂರು ವರ್ಷಗಳ ಹಿಂದೆ ರಸ್ತೆ ದಾಟುವಾಗ ನಡೆದ ಅಪಘಾತದಲ್ಲಿ ಅವರು ತನ್ನ ಏಕೈಕ ಮಗನನ್ನು ಕಳೆದುಕೊಂಡರು.

ಟಿವಿ ಮೆಕ್ಯಾನಿಕ್ ಆಗಿರುವ ಅವರು ಅನುಭವಿಸಿದ ನೋವು ಇನ್ನು ಯಾವ ಕುಟುಂಬವೂ ಅನುಭವಿಸಬಾರದು ಎಂದು ಸೀಲಾಂಪುರ್ನಲ್ಲಿ ಸಂಚಾರ ಅವ್ಯವಸ್ಥೆಯನ್ನು ಸರಿಪಡಿಸಿ ಸರಾಗಗೊಳಿಸುವ ಸಲುವಾಗಿ ಅವರು ವಿಶೇಷವಾಗಿ ಕೆಲಸ ಮಾಡುತ್ತಿದ್ದಾರೆ.ಇದೀಗ ಸೋಮವಾರದಿಂದ, ರಾಮ್ ತನ್ನ ಕರ್ತವ್ಯವನ್ನು ನಿರ್ವಹಿಸಲು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

ಸ್ವಯಂಸೇವಕರಿಗೆ ಫ್ಲೋರೊಸೆಂಟ್ ಜ್ಯಾಕೆಟ್ಸ್, ಕ್ಯಾಪ್ಸ್ ಮತ್ತು ಐಡೆಂಟಿಟಿ ಕಾರ್ಡುಗಳನ್ನು ಒಳಗೊಂಡಿರುವ ಕಿಟ್ಗಳನ್ನು ನೀಡಲಾಗುತ್ತಿದೆ.

Leave a Reply