ಭಾರತದಲ್ಲಿ ನ್ಯಾಯ ತೀರ್ಮಾನದ ಬಗೆಗಿನ ವಿಳಂಬದ ಕುರಿತ ಟೀಕೆ ಇಂದು ನಿನ್ನೆಯದಲ್ಲ. ಏನೇ ನಡೆದರೂ ಅದರ ಕುರಿತ ತೀರ್ಪು ಬರಲು ತುಂಬಾ ಸಮಯ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕರು ಸಾಯುವ ಹಂತದಲ್ಲಿ ಶಿಕ್ಷೆ ಪ್ರಕಟವಾದ ಉದಾಹರಣೆಗಳೂ ಇವೆ.

ಆದರೆ ಮಧ್ಯ ಪ್ರದೇಶದ ಗ್ವಾಲಿಯರ್ ಕಾಂತಿ ನ್ಯಾಯಾಲಯದಲ್ಲಿ ಎರಡು ಅತ್ಯಾಚಾರ ಪ್ರಕರಣದ ಬಗೆಗಿನ ತೀರ್ಪು ಕೆಲವೇ ದಿನಗಳಲ್ಲಿ ಪ್ರಕಟವಾಗಿದೆ. ಅಪ್ರಾಪ್ತ ವಯಸ್ಸಿನ ಹುಡುಗಿಯರ ವಿರುದ್ಧದ ಪ್ರಕರಣಗಳಲ್ಲಿ ಈ ತೀರ್ಪು ಬಂದಿದೆ.

ಕಾಂತಿ ನ್ಯಾಯಾಲಯದಲ್ಲಿ ಪೋಲೀಸರು ಆರೋಪ ಪಟ್ಟಿ ಸಲ್ಲಿಸಿದ ಐದು ದಿವಸಗಳಲ್ಲಿ ತೀರ್ಪು ಪ್ರಕಟವಾಗಿದೆ. ಆರರ ಹರೆಯದ ಹುಡುಗಿ ಮೇಲೆ ನಡೆದ ಆತ್ಯಾಚಾರ ಪ್ರಕರಣಕ್ಕೆ ಈ ತೀರ್ಪು ಬಂದಿದೆ. ಘಟನೆ ನಡೆದ 24 ಗಂಟೆಗಳಲ್ಲಿ ಆರೋಪಿಗಳ ಬಂಧನವಾಗಿತ್ತು. ಹನ್ನೆರಡು ದಿನಗಳಲ್ಲಿ ಪೋಲೀಸರು ಆರೋಪ ಪಟ್ಟಿ ಸಲ್ಲಿಸಿದರು.

ತ್ವರಿತ ಗತಿಯಲ್ಲಿ ತನಿಖೆ ನಡೆದು ಈ ತೀರ್ಮಾನ ಪ್ರಕಟವಾಗಿದೆ. ಜಿತೇಂದ್ರ ಕೃಷ್ಣ ಎಂಬಾತನಿಗೆ ಮರಣ ದಂಡನೆ ಶಿಕ್ಷೆ ಪ್ರಕಟವಾಗಿದ್ದು, ಈ ರೀತಿ ಕಾಂತಿ ಜಿಲ್ಲೆಯ ವಿಶೇಷ ನ್ಯಾಯಾಲಯ ಶಾಲಾ ವಿದ್ಯಾರ್ಥಿನಿಯನ್ನು ಅತ್ಯಾಚಾರ ಗೈದದ್ದಕ್ಕಾಗಿ ಅಟೋ ಚಾಲಕ ರಾಜ್ ಕುಮಾರ್ ಎಂಬಾತನಿಗೂ ಗಲ್ಲು ಶಿಕ್ಷೆ ನೀಡಲಾಗಿತ್ತು.

ಸಾಂದರ್ಭಿಕ ಚಿತ್ರ

Leave a Reply