ದೆಹಲಿಯಲ್ಲಿ ಎಂಟು ತಿಂಗಳ ಹಸುಳೆಯ ಮೇಲೆ ರೇಪ್ ನಡೆದಿದೆ. ಈ ರೇಪ್ ನಡೆಸಿದ್ದು ಬೇರೆ ಯಾರೂ ಅಲ್ಲ ಆ ಮಗುವಿನ ಸಂಬಂಧಿಯೇ! ನಗರದ ಶಾಲಿಮಾರ್ ಬಾಗ್‌ ನಲ್ಲಿ ಸೋಮವಾರದಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಾನು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದೆ. ನನ್ನ ಹೆಂಡತಿಯೂ ಕೂಲಿ ಕೆಲಸಕ್ಕೆ ಹೋಗುತ್ತಾಳೆ. ಹಿಂತಿರುಗಿ ಬಂದಾಗ ಹಾಸಿಗೆಯಲ್ಲಿ ಮಗು ರಕ್ತದ ಸ್ಥಿತಿಯಲ್ಲಿತ್ತು. ಕೂಡಲೇ ಆಸ್ಪತ್ರೆಗೆ ಕೊಂಡು ಹೋಗಿದ್ದೇವೆ. ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಮಗುವಿನ ತಂದೆ ಹೇಳಿದ್ದಾರೆ.


ಬಹಳ ಕೆಟ್ಟದು ಸಂಭವಿಸಿದೆ. ರಾಜಧಾನಿಯಲ್ಲಿ 8 ತಿಂಗಳುಹಸುಳೆಯನ್ನು ಕ್ರೂರವಾಗಿ ಅತ್ಯಾಚಾರ ಮಾಡಲಾಗಿದೆ, ಆಸ್ಪತ್ರೆಯಲ್ಲಿ ಮಗು ಸಾವು ಬದುಕಿನ ಹೋರಾಟ ನಡೆಸುತ್ತಿದೆ. ಆಕೆಯನ್ನು ಭೇಟಿಯಾಗಲು ಆಸ್ಪತ್ರೆಗೆ ಹೋಗಿ ಮಗುವನ್ನು ನೋಡಲು ಧೈರ್ಯ ಬರುತ್ತಿಲ್ಲ ! ದಯವಿಟ್ಟು ಮಗುವಿಗಾಗಿ ಪ್ರಾರ್ಥನೆ ಮಾಡಿ. ಎಂದು ಸ್ವಾತಿ ಜೈ ಹಿಂದ್ ಟ್ವೀಟ್ ಮಾಡಿದ್ದಾರೆ.

Leave a Reply