Image: Tech Digest

ಹೊಸದಿಲ್ಲಿ: ಕೆಲವೇದಿನಗಳು 2018 ನೆ ಇಸವಿಗೆ ವಿದಾಯ ಹೇಳಲು ಬಾಕಿ ಉಳಿದಿವೆ. ಈ ವರ್ಷ ಯುಟ್ಯೂಬಿನಲ್ಲಿ ಹೆಚ್ಚು ಯೂಸ್ ಆದ ಐದು ವೀಡಿಯೊಗಳು ಇಲ್ಲಿವೆ. ಈ ವೀಡಿಯೊಗಳಿಗೆ ಅತಿಹೆಚ್ಚು ವ್ಯೂವರ್ಸ್ ಸಿಕ್ಕಿದ್ದಾರೆ. ಜಗತ್ತಿನಾದ್ಯಂತ ನೋಡಲಾದ ವೀಡಿಯೊಗಳು, ಮೆಚ್ಚಿಗೆ ಗಳಿಸಿದವು.ಡೆಡಿ ಯಾಂಕಿ, ಡೆಸ್ಪಾಸಿಟೊ, ಶೇಪ್ ಆಫ್ ಯೂ ಅತಿಹೆಚ್ಚು ಜನಪ್ರಿಯವಾಗಿದೆ.

1- ಡೆಸ್ಪಾಸಿಟೊ ಎಫ್‍ಟಿ ಡೆಡಿ ಯಾಂಕಿ

2017ರಲ್ಲಿ ಸ್ಪೇನಿಶ್ ಡೆಸ್ಪಾಸಿಟೊ ಈವರ್ಷವೂ ಟಾಪ್ ಆಗಿದೆ. ಈ ವೀಡಿಯೊ ಎಲ್ಲರೂ ಮೆಚ್ಚಿಕೊಂಡಿದ್ದಾರೆ ಈವರೆಗೆ ವೀಡಿಯೊ 5.8 ಬಿಲಿಯನ್ ವ್ಯೂಸ್ ಸಿಕ್ಕಿದೆ. ಈ ಹಾಡುಗಳನ್ನು ಲುಯಿಸ್‍ಫಾಂಸೊ ಮತ್ತು ಡಿಜೆ ಡೆಡಿ ಯಾಂಕಿ ಹಾಡಿದ್ದಾರೆ.

2. ಇಡಿ ಸೀರನ್-ಶೇಪ್ ಆಫ್ ಯು

ಇಡಿ ಸೀರನ್‍ರ ಶೇಪ್ ಆಫ್ ಯೂ ಹಾಡಿಗೆ ಎರಡನೆ ಸ್ಥಾನ ಸಿಕ್ಕಿದೆ. ಇಂಗ್ಲಿಷ್ ಹಾಡುಗಾರ ಇಡಿ ಸೀರನ್ ಈ ಹಾಡನ್ನು ಹಾಡಿದ್ದಾರೆ.ಈ ವೀಡಿಯೊ ಈವರೆಗೆ 3.9 ಬಿಲಿಯನ್ ವ್ಯೂಸ್ ಸಿಕ್ಕಿದೆ. ಈ ಹಾಡು ಸಾಮಾಜಿಕ ಮಾಧ್ಯಮಗಳಲಿ ಹೆಚ್ಚು ಶೇರ್ ಆಗಿದೆ.

3.ವಿಝ್ ಖಲೀಫ-ಸೀಯು ಅಗೈನ್

ಹಾಲಿವುಡ್‍ನ ಅತ್ಯಂತ ಜನಪ್ರಿಯ ಸಿನೆಮಾ ಸಿರೀಸ್ ಫಾಸ್ಟ್ ಆಂಡ್ ಪ್ಯೂರಿಯಸ್ ಹಾಡು ಸಿಯೂ ಅಗೈನ್ ಮೂರನೆ ಸ್ಥಾನದಲ್ಲಿದೆ. ವಿಝ್ ಖಲೀಫ ಹಾಡಿದ್ದಾರೆ. ಈವರೆಗೆ ವೀಡಿಯೊಕ್ಕೆ 3.9 ಬಿಲಿಯನ್ ವ್ಯೂಸ್ ಸಿಕ್ಕಿದೆ. ಈ ಹಾಡು ಸಾಮಾಜಿಕ ಮಾಧ್ಯಮಗಳಲ್ಲಿಯೂ ಶೇರ್ ಆಗಿದೆ.

4. ಅಪ್ ಟೌನ್ ಫಂಕ್

ಈ ಹಾಡು ನಾಲ್ಕು ವರ್ಷಗಳಿಂದ ಟಾಪ್‍ನಲ್ಲಿದೆ. ಮಾರ್ಕ್ ರಾನ್ಸನ್ ಹಾಡಿದ ಹಾಡು ಹೆಚ್ಚು ಜನಪ್ರಿಯವಾಗಿದೆ. 2014ರಲ್ಲಿ ಈ ಹಾಡು ಬಂದಿತ್ತು. ಈ ಹಾಡಿನಲ್ಲಿ ಡಿಜೆ ಬ್ರೂನೊ ಮಾರ್ಸ್ ಕೂಡ ಇದ್ದಾರೆ. ಅವರ ಲೆನ್ಸ್ ಹೆಚ್ಚು ಜನಪ್ರಿಯವಾಗಿದೆ. ಈ ಹಾಡು ಈವರೆಗೆ 3.4 ಬಿಲಿಯನ್ ವ್ಯೂವರ್ಸ್ ನೋಡಿದ್ದಾರೆ.

5-ಮಾಶಾ ಆಂಡ್ ಬೇರ್:

ಮಕ್ಕಳಲ್ಲಿ ಇದು ಜನಪ್ರಿಯವಾಗಿದೆ. ಮಾಶಾ ಆಂಡ್ ಬಿಯರ್ ಮಕ್ಕಳ ಮನಗೆದ್ದಿದೆ. ಹಾಡಿನೊಂದಿಗೆ ಈ ಎಪಿಸೋಡನ್ನು ಅತಿಹೆಚ್ಚು ಬಾರಿ ನೋಡಲಾಗಿದೆ. ಈವರೆಗೆ ಇದಕ್ಕೆ 3.3 ಮಿಲಿಯನ್ ವ್ಯೂವರ್ಸ್ ಸಿಕ್ಕಿದ್ದಾರೆ.

Leave a Reply