ವೈದ್ಯರು ರೋಗಿಗೆ ಚಿಕಿತ್ಸೆ ನೀಡುತ್ತಾರೆ ಮತ್ತು ರೋಗಿಗಳ ಜೀವ ಉಳಿಸುತ್ತಾರೆ. ಆದರೆ ಅವರ ಚಿಕಿತ್ಸೆಯ ವೆಚ್ಚ ಬಿಲ್ ವಿಷಯಕ್ಕೆ ಬಂದರೆ ಹೆಚ್ಚಾಗಿ ಕಾಂಪ್ರಮೈಸ್ ಮಾಡಲ್ಲ. ಆದರೆ ಮಾರ್ಚ್ 2 ರಂದು ಅಹಮದಾಬಾದ್ನಲ್ಲಿ, ತೋಟಗಾರನೋರ್ವನ ಹೆಂಡತಿ ಕೇವಲ 640 ಗ್ರಾಂ ಮಗುವಿಗೆ ಜನ್ಮ ನೀಡಿದಳು. ಮೂರು ಬಾರಿ ಗರ್ಭಪಾತದ ನಂತರ, ಈ ಮಗುವನ್ನು ಉಳಿಸಲು ಅದರ ಪೋಷಕರು ಸಾಧ್ಯವಿರುವ ಎಲ್ಲವನ್ನೂ ಮಾಡಲು ಬಯಸಿದ್ದರು. ಆದರೆ ಅವರು ದುಬಾರಿ ಚಿಕಿತ್ಸೆಯ ಬಗ್ಗೆ ತಿಳಿದಾಗ ನಿರಾಶೆಗೊಂಡರು. ನಿರಾಶೆಗೊಂಡ ಈ ದಂಪತಿಗೆ ಸಹಾಯ ಮಾಡಲು ವೈದ್ಯರು ಮುಂದೆ ಬಂದ ಮಾನವೀಯ ಘಟನೆ ವರದಿಯಾಗಿದೆ.

ವೈದ್ಯರು, ಕ್ರೌಡ್ ಫಂಡಿಂಗ್ ಮೂಲಕ ಭೋಲು ಕೋರಿ ಮತ್ತು ಅವರ ಪತ್ನಿಯ ಮುಗ್ಧ ಮಗುವಿನ ಚಿಕಿತ್ಸೆಗಾಗಿ ಹಣವನ್ನು ಜಮೆ ಮಾಡಿದರು. ಈ ಸಹಾಯದಲ್ಲಿ, 33 ಜನರು ನೇರ ಹಣವನ್ನು ದಾನ ಮಾಡಿದರೆ, 158 ಜನರು ಆನ್‌ಲೈನ್ ದಾನದ ಮೂಲಕ ಈ ದಂಪತಿಗೆ ಸಹಾಯ ಮಾಡಿದರು. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿನ ದಂಪತಿಗಳ ಕಥೆ ಜನರಿಗೆ ಸಹಾಯ ಮಾಡಲು ಪ್ರೇರೇಪಿಸಿತು.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಹುಟ್ಟಿದ ನಾಲ್ಕು ತಿಂಗಳಬಳಿಕವೂ ಮಗು (ಬೇಬಿ ಅರ್ಜುನ್) 1.875 ಕೆಜಿ ತೂಕ ಇತ್ತು ಮತ್ತು ದೈಹಿಕವಾಗಿ ತುಂಬಾ ದುರ್ಬಲ ಆಗಿತ್ತು. ಸದ್ಯಕ್ಕೆ ಡಿಸ್ಚಾರ್ಜ್ ಮಾಡಲಾಗಿದೆ. ಜನರ ಸಹಾಯದಿಂದ ಮಗುವಿನ 14 ಲಕ್ಷ ರೂ. ವೈದ್ಯರು ಜಮೆ ಮಾಡಿ ಮಗುವಿನ ಜೀವ ಉಳಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ.  “ಮಗು ಜನ್ಮತಃ ಉಸಿರಾಟ, ಸೋಂಕು, ಆಹಾರ ಸಮಸ್ಯೆ ಮತ್ತು ಹೃದಯದ ತೊಂದರೆಗಳಿಂದ ಬಳಲುತ್ತಿತ್ತು. ಈ ಕಾರಣದಿಂದ ಮಗುವಿನ ಪೋಷಕರು ತುಂಬಾ ಹತಾಶರಾಗಿದ್ದರು. ಈ ನಿಟ್ಟಿನಲ್ಲಿ ನಾವು ಸಹಾಯಕ್ಕೆ ಮುಂದೆ ಬಂದೆವು” ಎಂದು ಡಾ.ಭವಿಕ್ ಷಾ ಹೇಳಿದರು. 

Leave a Reply