ಜೀವಂತ ನಾಯಿ ಮರಿಯನ್ನು ಯುವಕನೋರ್ವ ಮೊಸಳೆ ಇರುವ ಕೆರೆಗೆ ಎಸೆಯುವ ಅಮಾನವೀಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನ ಆತನಿಗೆ ಛೀಮಾರಿ ಹಾಕಿದ್ದಾರೆ.

ಈ ಘಟನೆ ಇಂಡೋನೇಷ್ಯಾದಲ್ಲಿ ಸಂಭವಿಸಿದ್ದು, ಕೆರೆಯತ್ತ ತನ್ನ ಸ್ನೇಹಿತರ ಜತೆಗೂಡಿ ಬಂದ ಯುವಕ, ಬ್ಯಾಗ್ ನಿಂದ ನಾಯಿ ಮರಿಯನ್ನು ಹೊರ ತೆಗೆಯುತ್ತಾನೆ. ನಂತರ ನಾಯಿಯ ಕತ್ತನ್ನು ಹಿಡಿದು ಜೋರಾಗಿ ಎಸೆಯುತ್ತಾನೆ. ಆತನ ಹಿಂದಿನಿಂದ ಆತನ ಸ್ನೇಹಿತರ ಮಾತುಗಳೂ ಕೇಳುತ್ತದೆ.

ವಿಡಿಯೋದಲ್ಲಿ ಕಾಣುವಂತೆ, ನಾಯಿ ಮರಿ ಜೀವ ಉಳಿಸಲು ದಡದತ್ತ ಈಜಲು ಪ್ರಯತ್ನಿಸುತ್ತದೆ.ಆದರೆ ನೀರಿನ ರಭಸದಿಂದ ನಾಯಿ ಮರಿಗೆ ವೇಗವಾಗಿ ಈಜಲು ಸಾಧ್ಯವಾಗಿಲ್ಲ. ಪರಿಣಾಮವಾಗಿ ನಾಯಿ ಮರಿಯನ್ನು ಮೊಸಳೆ ಬಂದು ತಿಂದು ಬಿಟ್ಟಿತು. ಈ ರಾಕ್ಷಸೀಯ ಕೃತ್ಯ ಎಸೆದ ಯುವಕರು ನಗುತ್ತಾ ವಿಡಿಯೋವನ್ನು ಚಿತ್ರಿಸಿದ್ದು, ನಂತರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ‌. ಈ ಯುವಕರನ್ನು ಬಂಧಿಸಿ ಸೂಕ್ತ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಲಾಗಿದೆ.

Leave a Reply