ನಾವು ಮಕ್ಕಳ ಕೈಗೆ ಮೊಬೈಲ್, ಟ್ಯಾಬ್, ಚಾರ್ಜರ್ ಕೊಡುತ್ತೇವೆ. ನಿನ್ನೆ ಮಗು ಬಿಂದು ಚಾರ್ಜರ್ ವಯರ್ ಬಾಯಿಗೆ ಹಾಕಿ ವಿದ್ಯುತ್ ಶಾಕ್ ನಿಂದ ಬಲಿಯಾದದ್ದು ಸುದ್ದಿಯಾಗಿತ್ತು.

ಇದೀಗ ಹೈದರಾಬಾದ್ ನಲ್ಲಿ ಹನ್ನೊಂದು ತಿಂಗಳ ಮಗುವೊಂದು ಇಯರ್ ಫೋನ್ ಬಾಯಿಗೆ ಹಾಕಿ ನುಂಗಿದ ಘಟನೆ ನಡೆದಿದೆ.

ಪೂರ್ವ ಗೋದಾವರಿ ಜಿಲ್ಲೆಯ ಪರ್ಸಲಾಪುದಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶಸ್ತ್ರ ಚಿಕಿತ್ಸೆಯ ಬಳಿಕ ಇಯರ್ ಫೋನನ್ನು ಹೊರ ತೆಗೆದಿದ್ದಾರೆ ಎನ್ನಲಾಗಿದೆ.

ಆಟವಾಡುತ್ತಿದ್ದ ಮಗು ವಿಪರೀತ ಅಳು ನಿಲ್ಲಿಸದಿದ್ದಾಗ ಆಸ್ಪತ್ರೆಗೆ ಕೊಂಡು ಹೋಗಿದ್ದರು. ಅಲ್ಲಿ ಪ್ರಾಥಮಿಕ ಪರೀಕ್ಷೆಯ ಬಳಿಕ ಮಗುವಿಗೆ ಯಾವ ತೊಂದರೆಯೂ ಇಲ್ಲ ಎಂದು ವೈದ್ಯರು ಹೇಳಿದರು. ನಂತರ ಎಕ್ಸರೇ ತೆಗೆದು ನೋಡಿದಾಗ ಮಗು ಇಯರ್ ಫೋನ್ ಕವರ್ ನುಂಗಿರುವುದು ಕಂಡು ಬಂದಿದೆ. ನಂತರ ಶಸ್ತ್ರಚಿಕಿತ್ಸೆ ಮಾಡಿ ಹೊರ ತೆಗೆಯಲಾಯಿತು.

Leave a Reply