ಮುಂಬೈ: ಆರು ತಿಂಗಳ ಹಸುಳೆಯೊಂದು ತಾಯಿಯ ಕೈ ಯಿಂದ ಜಾರಿ ಕೆಳಗೆ ಬಿದ್ದು ಅಸು ನೀಗಿದ ಘಟನೆ ಮುಂಬೈಯಲ್ಲಿ ನಡೆದಿದೆ. ತಾಯಿಯು ಹೈ ಹೀಲ್ಡ್ ಚಪ್ಪಲಿ ಧರಿಸಿದ ಕಾರಣದಿಂದ ಆಯ ತಪ್ಪಿ ಈ ಅವಘಡ ಸಂಭವಿಸಿದೆ.

ಸಂಬಂಧಿಕರ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಲು ಫಹ್ಮೀದಾಶೈಖ್ ಮತ್ತು ಕುಟುಂಬ ಭಾನುವಾರ ಆಗಮಿಸಿತ್ತು. ಬಳಿಕ ಮನೆಗೆ ಮರಳಲು ಪ್ರಥಮ ಅಂತಸ್ತಿನಿಂದ ಮಗುವನ್ನು ಹಿಡಿದುಕೊಂಡು ಪತಿಯೊಂದಿಗೆ ಇಳಿಯುತ್ತಿರುವಾಗ ಈ ಅವಘಡ ಸಂಭವಿಸಿದೆ.

ಈ ಸಂಧರ್ಭದಲ್ಲಿ ಹಠಾತ್ತನೆ ಆಯತಪ್ಪಿದಾಗ ಮಗು ಕೈಜಾರಿ ಕೆಳಗೆ ಬಿದ್ದು ಕೆಳಕ್ಕುರುಳಿತ್ತು. ರಕ್ತದಿಂದ ತೋಯ್ದ ಮಗುವನ್ನು ಸಮೀಪದ ಆಸ್ಪತ್ರೆಗೆ ತಕ್ಷಣ ದಾಖಲಿಸಲಾದರೂ ಬದುಕಿಸಲಾಗಲಿಲ್ಲ.

Leave a Reply