ಬಿಯರ್ ಕಂಪೆನಿಯೊಂದು ಪ್ರಾಯೋಜಿಸಿದ ಪಂದ್ಯ ಶ್ರೇಷ್ಟ ಪ್ರಶಸ್ತಿಯನ್ನು ಈಜಿಪ್ತ್ ಗೋಲ್ ಕೀಪರ್ ಮುಹಮ್ಮದ್ ಎಲ್‍ಶನಾವಿಯವರು ತಿರಸ್ಕರಿಸಿದ್ದಾರೆ. ಗ್ರೂಪ್ ಎ ಯಲ್ಲಿ ಉರುಗ್ವೆ ವಿರುದ್ಧ ನಡೆದ ಪಂದ್ಯದಲ್ಲಿ ರೋಮಾಂಚಕಾರಿ ಪ್ರದರ್ಶನ ನೀಡಿದ ಗೋಲ್ ಕೀಪರ್, ಪಂದ್ಯ ಶ್ರೇಷ್ಟ ಪ್ರಶಸ್ತಿ ಆಯ್ಕೆಯಾಗಿದ್ದರು.

ಪಂದ್ಯದಲ್ಲಿ ಶೂನ್ಯ ಒಂದು ಗೋಲಿನ ಅಂತರದಲ್ಲಿ ಈಜಿಪ್ತ್ ಸೋಲುಂಡರೂ ಮುಹಮ್ಮದ್ ಎಲ್‍ಶನಾವಿಯವರ ಪ್ರದರ್ಶನ ಅಧ್ಭುತವಾಗಿತ್ತು. ಅವರ ಈ ಆಟದಿಂದ ಕೇವಲ ಒಂದು ಗೋಲಿಗೆ ಉರುಗ್ವೆ ತೃಪ್ತಿ ಪಡಬೇಕಾಯಿತು. ಅಮೇರಿಕದ ಪ್ರಸಿದ್ಧ ಬಿಯರ್ ಕಂಪೆನಿ ಬುಡ್ ವೇಯ್ ಸರ್ ಪಂದ್ಯ ಶ್ರೇಷ್ಟ ಪ್ರಶಸ್ತಿಯ ಪ್ರಾಯೋಜಕತ್ವ ವಹಿಸಿತ್ತು.

ಧಾರ್ಮಿಕ ಪರವಾದ ಕಾರಣಗಳಿಗಾಗಿ ಈ ಪ್ರಶಸ್ತಿಯನ್ನು ತಿರಸ್ಕರಿಸಿರುವುದಾಗಿ ಎಲ್‍ಶನಾವಿ ಸ್ಪಷ್ಟಪಡಿಸಿದರು. ಮದ್ಯಕ್ಕೆ ಸಂಬಂಧಿಸಿದ ಕಂಪೆನಿಗಳ ಯಾವುದೇ ಪ್ರಶಸ್ತಿ ಪಡೆಯಲಾರೆನೆಂದು ಅವರು ತನ್ನ ನಿಲುವನ್ನು ಬಹಿರಂಗಪಡಿಸಿದರು. ಟ್ರೋಫಿ ನಿರಾಕರಿಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿದೆ

Leave a Reply