ಬ್ರಸಲ್ಸ್ : ಫೆಲಸ್ತೀನ್ ರಾಷ್ಟ್ರ ನಿರ್ಮಾಣಕ್ಕೆ ಯುರೋಪಿಯನ್ ಯೂನಿಯನ್ 53 ಮಿಲಿಯನ್ ಡಾಲರ್ ನೆರವು ನೀಡಲಾಗುತ್ತಿದೆ. 42.5 ಮಿಲಿಯನ್ ಯುರೊ ಫಂಡ್ ನೀಡಲಾಗುವುದು ಎಂದು ಯುರೋಪಿಯನ್ ಯೂನಿಯನ್ ಕಳೆದ ದಿವಸ ಬ್ರಿಸಲ್ಸ್‍ನಲ್ಲಿ ಸೇರಿದ ಸಭೆಯಲ್ಲಿ ಘೋಷಿಸಿದೆ.

ಫೆಲಸ್ತೀನ್-ಇಸ್ರೇಲ್ ವಿಷಯದಲ್ಲಿ ಶಾಂತಿ ಕ್ರಮಗಳನ್ನು ಅಮೆರಿಕ ಏಕಪಕ್ಷೀಯವಾಗಿ ತೀರ್ಮಾನಿಸಬಾರದು ಎಂದು ಯುರೋಪಿಯನ್ ಯೂನಿಯನ್ ಆಗ್ರಹಿಸಿದೆ. ಹೀಗಿರುವ ತೀರ್ಮಾನದಲ್ಲಿ ಕೊನೆಯ ಫಲಿತಾಂಶ ಸೊಲು ಆಗಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ವಿಷಯದಲ್ಲಿ ಚರ್ಚೆಗಳ ಚೌಕಟ್ಟು ತಯಾರಿಸಬೇಕೆನ್ನುವುದು ಬಹು ಮಂದಿಯ ಅಪೇಕ್ಷೆಯಾಗಿದೆ. ಎಲ್ಲರೂ ಇದರಲ್ಲಿ ಭಾಗೀದಾರರಾಗಬೇಕಾಗಿದೆ.

ಇದು ಈ ಪ್ರಕ್ರಿಯೆಗೆ ಅಂತ್ಯಗತ್ಯವಾಗಿದ್ದು, ಅಮೆರಿಕಕ್ಕೆ ಏಕಪಕ್ಷೀಯವಾಗಿ ಅಥವಾ ಅಮೆರಿಕವನ್ನು ಬಿಟ್ಟು ಈ ವಿಷಯದಲ್ಲಿ ವ್ಯವಹರಿಸಲು ಶಾಂತಿ ಪ್ರಕ್ರಿಯೆಯನ್ನು ಜೀವಂತವಿರಿಸಲು ಸಾಧ್ಯವಿಲ್ಲ. ವಲಯಕ್ಕೆ ಸಂಬಂಧಿಸಿದಂತೆ ಇದು ಕಷ್ಟದ ಸಮಯವಾಗಿದೆ ಎಂದು ಯುರೋಪಿಯನ್ ಯೂನಿಯನ್ ವಕ್ತಾರ ಫೆಡ್ರಿಕ್ ಮೊಗೆರಿನಿ ಹೇಳಿದರು.

ಪೂರ್ವ ಜೆರುಸಲೇಮ್‍ನಲ್ಲಿ ಭವಿಷ್ಯದಲ್ಲಿ ಫೆಲಸ್ತೀನ್ ದೇಶವನ್ನಾಗಿಸುವ ಉದ್ದೇಶವನ್ನು ಹೊಂದಿರುವ ಯುರೋಪಿಯನ್ ಯೂನಿಯನ್ ಫೆಲಸ್ತೀನಿಗೆ ಸಹಾಯ ನೀಡಲು ತೀರ್ಮಾನಿಸಿದೆ. ಅದಕ್ಕೆ ಈ ಸಹಾಯ ಧನ ಬೆಂಬಲವೂ ಆಗಿರುತ್ತದೆ.

ಫೆಲಸ್ತೀನಿ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಯುಎನ್‍ಆರ್ ಡಬ್ಲ್ಯುಎಗೆ ಬೆಂಬಲ ನೀಡುವ ವಿಷಯ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ವಿಶ್ವ ಸಂಸ್ಥೆಯ ಏಜೆನ್ಸಿಗಳಿಗೆ ಅತ್ಯಂತ ಹೆಚ್ಚು ಹಣ ಅಮೆರಿಕ ನೀಡುತ್ತಿತ್ತು. ಆದರೆ ಈ ವರ್ಷದ ಮೊದಲ ಗಡು ಅಮೆರಿಕ ನೀಡಿಲ್ಲ. ಸಹಾಯ ಧನ ಕಡಿಮೆ ಮಾಡಿರುವುದಾಗಿ ಟ್ರಂಪ್ ಘೋಷಿಸಿದ್ದಾರೆ.

Leave a Reply