Image: Moneycontrol

ಎರುಮಪೆಟ್ಟಿ(ಕೇರಳ): ಕೇರಳದಲ್ಲಿ ಅರಬಿಕ್ ಅಧ್ಯಾಪಕನೊಬ್ಬ ಹತ್ತು ವರ್ಷದ ಬಾಲಕನಿಗೆ ಅನೈಸರ್ಗಿಕ ಲೈಂಗಿಕ ಕಿರುಕುಳ ನೀಡಿದ್ದು ಆತನನ್ನು ಅಧ್ಯಾಪಕನನ್ನು ಹಿಡಿದು ಊರವರು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಅಧ್ಯಾಪಕನನ್ನು ಪನ್ನಿತ್ತಡಂ ಚಿರಮೇಂಗಾಡ್ ಖಾಸಗಿ ಶಾಲೆಯ ಅರಬಿ ಅಧ್ಯಾಪಕ ಮತ್ತು ಮದ್ರಸಾ ಅಧ್ಯಾಪಕನಾದ ಪೊನ್ನಾನಿಯ ಅಲಿಮೋನ್(22) ಗುರುತಿಸಲಾಗಿದೆ. ಪೊಲೀಸರು ಈತನ ವಿರುದ್ಧ ಪೊಸ್ಕೊ ಕಾನೂನು ಪ್ರಕಾರ ಕೇಸುದಾಖಲಿಸಿದ್ದಾರೆ. ಘಟನೆ ಕಳೆದ ರವಿವಾರ ನಡೆದಿತ್ತು..
ರವಿವಾರ ಸಂಜೆ ಆರುಗಂಟೆಗೆ ಶಾಲೆಯಲ್ಲಿ ಬಾಲಕನಿಗೆ ಕಿರುಕುಳ ನೀಡಿದ್ದು ದಿನಾಲೂ ಸಂಜೆವೇಳೆ ಶಾಲೆಯೊಂದರಲ್ಲಿ ಅರಬಿಕ್ ಭಾಷೆ ಕಲಿಸುತ್ತಿದ್ದ. ಇದೇ ಶಾಲೆಗೆ ತಾನು ಕಲಿಸುತ್ತಿರುವ ಇನ್ನೊಂದು ಮದ್ರಸಾದ ವಿದ್ಯಾರ್ಥಿಯನ್ನು ಶಾಲೆಗೆ ಕರೆದುಕೊಂಡು ಬಂದು ಕಿರುಕುಳ ನೀಡಿದ್ದನು. ಬಾಲಕ ಕಲಿಯುವುದರಲ್ಲಿ ಹಿಂದುಳಿದಿದ್ದಾನೆ. ಶಾಲೆಯಲ್ಲಿ ಇತರ ವಿದ್ಯಾರ್ಥಿಗಳ ಜೊತೆ ಸ್ಪೆಷಲ್ ಕ್ಲಾಸ್ ಮಾಡುವುದಾಗಿ ಹೇಳಿ ಬಾಲಕನನ್ನು ಶಾಲೆಗೆ ಕರೆದು ಕೊಂಡು ಬಂದಿದ್ದನು.

ಮನೆಗೆ ಬಂದ ಬಾಲಕ ಹೆತ್ತವರಿಗೆ ಅಧ್ಯಾಪಕನ ದುಷ್ಕೃತ್ಯವನ್ನು ತಿಳಿಸಿದ್ದಾನೆ. ಕೂಡಲೇ ಬಾಲಕನ ಸಂಬಂಧಿಕರು ಮತ್ತು ಊರವರು ಸೇರಿ ಶಾಲೆಯಲ್ಲಿದ್ದ ಅಧ್ಯಾಪಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಅಲಿಮೋನ್‍ನನ್ನು ಶಾಲೆಯಿಂದ ವಜಾಗೊಳಿಸಲಾಗಿದ್ದು ಕಾನೂನು ಕ್ರಮ ಜರಗಿಸಲಾಗುವುದು ಎಂದು ಶಾಲಾ ಮ್ಯಾನೇಜರ್ ತಿಳಿಸಿದರು.

Leave a Reply