ಮೊಬೈಲ್ ಬಳಕೆ ಇಂದು ಅಗತ್ಯಕ್ಕಿಂತ ‌ಜಾಸ್ತಿಯಾಗಿದೆ ಸಾಮಾಜಿಕ ಜಾಲತಾಣವೆಂಬ ಮಾಯಲೋಕದಲ್ಲಿ ಜನ ನೈಜ ಲೋಕವನ್ನೆ ಮರೆಯುತ್ತಿದ್ದಾರೆ.‌ ಒಮ್ಮೆ ಈ ಮೊಬೈಲ್ ಪೋನ್ ಹಿಡಿದು ಕುಳಿತರೆ ತಮ್ಮ ಹತ್ತಿರ ಏನು ಸಂಭವಿಸಿದರು ಗೊತ್ತಾಗುವುದಿಲ್ಲ.

ಕೊಲ್ಕತ್ತಾದಲ್ಲಿ ತುಂಪಾ ಎನ್ನುವ ಮಹಿಳೆಗೂ ಇದೇ ರೀತಿಯ ಅಭ್ಯಾಸ ಇತ್ತು. ಸಾಮಾಜಿಕ ಜಾಲತಾಣ ಅತಿಯಾಗಿ ಉಪಯೋಗಿಸುವ ಗುಂಗಿನಲ್ಲಿ ಲೋಕವನ್ನೆ ಮರೆಯುತ್ತಿದ್ದಳು.

ಜನವರಿ 24 ರಂದು ಅವಳ ಪತಿ ಸುರಜಿತ್ ಪಾಲ್ ಮನೆಗೆ‌ ಬಂದು ನೋಡಿದಾಗ ಮನೆಯಲ್ಲಿ ಅಡುಗೆ ಮಾಡಿರಲಿಲ್ಲ. ಹೆಂಡತಿ ಮೊಬೈಲ್ ಒತ್ತುವುದರಲ್ಲಿ ತಲ್ಲೀನಳಾಗಿದ್ದಳು.

ಪಾಲ್ ಸ್ವತಹ ತಾನೇ ಅಡುಗೆ ಮಾಡಿ ತಿಂದ ನಂತರ ಗಂಡ ಹೆಂಡತಿ ಇಬ್ಬರ ನಡುವೆ ಇದೇ ವಿಷಯದಲ್ಲಿ ಜಗಳ ನಡೆದು ಪಾಲ್ ತನ್ನ ಹೆಂಡತಿಯ ತಲೆಗೆ ಚಾಕುವಿನಿಂದ ಹಲವು ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ.

ಸಾಮಾಜಿಕ ಜಾಲತಾಣಗಳ ಚಟದಿಂದ ಅದೆಷ್ಟು ಸಂಬಂಧಗಳು ಹಾಳಾಗಿವೆ.

Leave a Reply