ಸಾಮಾಜಿಕ ಜಾಲತಾಣಗಳಲ್ಲಿ ಯಾವುದು ಸತ್ಯ ಮತ್ತು ಯಾವುದು ಫೇಕ್ ಎಂಬುದು ಕಂಡು ಹಿಡಿಯುವುದು ಕಷ್ಟ. ಫೇಕ್ ಮೆಸೆಜ್ ಗಳು ಆದಷ್ಟು ಬೇಗ ವೈರಲ್ ಆಗುತ್ತಿದೆ. ಇದಕ್ಕೊಂದು ಇಮೇಜ್ ಕಳೆದ ಕೆಲವು ವರ್ಷಗಳಿಂದ ಜನರು ಫಾರ್ವರ್ಡ್ ಮಾಡುತ್ತಿರುವ ಈ ಮೆಸೆಜ್.

ಅದರಲ್ಲಿ ಕೇಂದ್ರ ಸರಕಾರವು ಅಬುಲ್ ಕಲಾಮ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಹೆಸರಲ್ಲಿ ಶೇ.75 % ಅಂಕಗಳಿಸಿದವರಿಗೆ ನಗದು ಮೊತ್ತ ನೀಡುತ್ತಿದೆ ಎಂಬ ಸಂದೇಶ ಹೊಂದಿರುವ ಇಮೇಜ್ ವೈರಲ್ ಆಗಿದೆ. ಜನರು ಅದನ್ನು ಮುಗ್ಧವಾಗಿ ಎಲ್ಲಾ ಗ್ರೂಪ್ ಗಳಿಗೆ ಕಳುಹಿಸುತ್ತಾರೆ. ಆದರೆ ಅಂತಹ ಯಾವುದೇ ಯೋಜನೆ ಇಲ್ಲ, ಇದೊಂದು ಫೇಕ್ ಮೆಸೇಜ್ ಆಗಿದೆ ಎಂದು ತಿಳಿದು ಬಂದಿದೆ.

ಆದ್ದರಿಂದ ಈ ಮೆಸೇಜ್ ಅನ್ನು ಯಾರಿಗೂ ಕಳಿಸಿ ತಮ್ಮ ಶ್ರಮ ಮತ್ತು ಅವರ ಶ್ರಮವನ್ನು ವ್ಯರ್ಥ ಗೊಳಿಸದಿರಿ‌.

Leave a Reply