ಫೇಕ್ ಮೆಸೇಜ್ ಗಳನ್ನೂ ಮಾಡುವುದು ತಪ್ಪು. ಭಾರತದಂತಹ ಭಾವನಾತ್ಮಕ ದೇಶದಲ್ಲಿ ಅದು ಇನ್ನೂ ಅವಾಂತರಗಳನ್ನು ಸೃಷ್ಟಿಸುತ್ತದೆ. ಸತ್ಯಾಂಶ ತಿಳಿಯುವ ಹೊತ್ತಿಗೆ ಯಾರದಾದರೂ ಜೀವ ಬಲಿಯಾಗಿರುತ್ತದೆ. ಕೋಮು ಗಲಭೆಗಳಿಂದ ಸಮಾಜ ಹೊತ್ತಿ ಉರಿಯುತ್ತದೆ ಅಥವಾ ಕೋಮು ಪ್ರಚೋದನೆಗೆ ತುಪ್ಪ ಸುರಿಯುತ್ತದೆ. ಮಾತ್ರವಲ್ಲ ಮಾಧ್ಯಮಗಳ ಪಾತ್ರವೂ ಇದರಲ್ಲಿ ಕಡಿಮೆ ಏನಿಲ್ಲ.

ಇಲ್ಲೊಂದು ವಿಡಿಯೋ ನೀವು ನೋಡಲೇ ಬೇಕು… ಫೇಕ್ ಮೆಸೇಜ್ ಗಳನ್ನೂ ಆ ವಿಡಿಯೋ ಅನಾವರಣ ಗೊಳಿಸುತ್ತದೆ.

1. ಓರ್ವ ಟ್ವಿಟರ್ ಬಳಕೆ ದಾರ ಮಹಿಳೆಯೊಬ್ಬಳನ್ನು ಕಾರಿನಿಂದ ಎಳೆದು ಹೊಡೆದು ಹತ್ಯೆ ಮಾಡುವ ವಿಡಿಯೋ ಅಪ್ಲೋಡ್ ಮಾಡಿದ್ದನು. ಆಕೆಯನ್ನು ಮುಸ್ಲಿಮರು ಕೊಂದಿದ್ದರೆ ಎಂದು ಕ್ಯಾಪ್ಷನ್ ಬೇರೆ ಕೊಡುತ್ತಾನೆ. ನಿಜವಾಗಿ ಅದೊಂದು ಬೀದಿ ನಾಟಕ ಆಗಿತ್ತು. ಪತ್ರಕರ್ತರೊಬ್ಬರ ಕೊಲೆಗೆ ಸಂಬಂಧಿಸಿ ಅದನ್ನು ಪ್ರದರ್ಶನಮಾಡಲಾಗಿತ್ತು. ಮುಸ್ಲಿಂ ದ್ವೇಷದ ಮೆಸೇಜ್ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದವು ಮಾತ್ರವಲ್ಲ ರಾಷ್ಟ್ರೀಯ ಮಟ್ಟದ ಮಾಧ್ಯಮಗಳೂ ಇದನ್ನು ಪ್ರಕಟಿಸಿತ್ತು. ನಂತರ ಅದಕ್ಕೆ ಸ್ಪಷ್ಟನೆ ಕೊಟ್ಟಿತ್ತು. ಅಲ್ಲಿ ವರೆಗೆ ಒಂದು ಸಮುದಾಯದ ಹೆಸರು ಸಂಪೂರ್ಣ ಡ್ಯಾಮೇಜ್ ಆಗಿತ್ತು.

2. ಇನ್ನೊಂದು ವಿಡಿಯೋ ಪಾಕಿಸ್ತಾನ ಗೆದ್ದಾಗ ಮುಸ್ಲಿಮರು ಸಂಭ್ರಮಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವಾಟ್ಸಾಪ್ ಮತ್ತು ಯೂಟ್ಯೂಬ್ ಗಲ್ಲಲ್ಲಿ ಲಕ್ಷಾಂತರ ಮಂದಿ ನೋಡಿದರು ಮತ್ತು ಮುಸ್ಲಿಮರು ದೇಶ ವಿರೋಧಿಗಳು ಎಂದು ಬಿಂಬಿಸಲು ಪ್ರಯತ್ನಿಸಲಾಯಿತು. ನಿಜವಾಗಿ ಆ ವಿಡಿಯೋ ಇದ್ದವರು ಪಾಕಿಸ್ತಾನಿಗಳಾಗಿದ್ದರು.

ನಿಜವಾಗಿ ಇಂತಹ ಫೇಕ್ ಮೆಸೇಜ್ ಗಳನ್ನೂ ಹಿಂದೂಗಳು ಮಾಡಲಿ ಮುಸ್ಲಿಮರು ಮಾಡಲಿ. ಅವೆರಡೂ ಅಧರ್ಮ ಎನ್ನುವುದರಲ್ಲಿ ಸಂಶಯ ಇಲ್ಲ. ಫ್ರೆಂಚ್ ಚಿಂತನೆಯಿಂದ ಪ್ರೇರಿತ ಗೊಂಡು ರಾಜಕೀಯ ದುರುದ್ದೇಶ ಮತ್ತು ಹಿತಾಸಕ್ತಿಗಾಗಿ ಬಳಸಲಾಗುತ್ತದೆ. ಇದರಿಂದ ಅವರ ಸ್ವಾರ್ಥ ಅಲ್ಲದೆ ಬೇರೆ ಏನೂ ಅಲ್ಲ. ಬಿಜೆಪಿ ಫೇಕ್ ಮೆಸೇಜ್ ಗಳ ವಿರುದ್ಧ ಮಾತಾನಾಡಿದೆ. ಆದರೆ ಅದರ ಐಟಿ ಸೆಲ್ ನವರು ಇಂತಹ ಫೇಕ್ ಮೆಸೇಜ್ ಮಾಡಿ ಸಿಕ್ಕಿ ಬಿದ್ದ ಅಂಶವನ್ನು ಟಿ ಆರ್ ಟಿ ವಿಡಿಯೋ ಪ್ರಸ್ತುತ ಪಡಿಸುತ್ತದೆ.

ಭಾರತದ ಜೀವಾಳ ರಾಜಕೀಯ ಅಲ್ಲ. ಭಾರತದ ಜೀವಾಳ ಬಹುಸಂಸ್ಕೃತಿ ಮತ್ತು ಸೌಹಾರ್ದತೆಯಾಗಿದೆ. ಸೌಹಾರ್ದತೆ ಮರೀಚಿಕೆಯಾಗಿ ದ್ವೇಷ ಹೆಮ್ಮರವಾದರೆ ಇಲ್ಲಿ ನಿಶ್ಚಿಂತೆಯಿಂದ ಬಾಳಲಾರರು. ನಮ್ಮ ಮುಂದಿನ ಪೀಳಿಗೆ ಅಥವಾ ನಮ್ಮ ಮಕ್ಕಳು ಅದರ ಕೆಟ್ಟ ಪರಿಣಾಮವನ್ನು ಅನುಭವಿಸಬಹುದು. ಆಗ ಅದು ನಮ್ಮ ಕೈ ತಪ್ಪಿ ಹೋಗಿರಬಹುದು. ಎಚ್ಚೆತ್ತು ಕೊಳ್ಳದಿದ್ದರೆ ಗಂಡಾಂತರ ತಪ್ಪಿದ್ದಲ್ಲ!

Leave a Reply