ನವದೆಹಲಿ: ನಕಲಿ ವೆಬ್ ಸೈಟ್ ಮತ್ತು ಈ ಮೇಲ್ ತಯಾರಿಸಿ ನೌಕರಿ ನೀಡುವ ವಾಗ್ದಾನವಿತ್ತು ವಂಚಿಸಿದ ಈರ್ವರನ್ನು ಪೋಲಿಸರು ಬಂಧಿಸಿದ್ದಾರೆ.

ಗಾಝಿಯಾಬಾದಿನ ಚೇತನ್ ಸೋನಿ(27) ಮತ್ತು ನೈನಾ ಸಿಂಗಾಲ್(27) ಬಂಧಿತ ಆರೋಪಿಗಳು. ಸುಮಾರು ನೂರಾರು ಮಂದಿಯನ್ನು ನೌಕರಿ ನೀಡುವುದಾಗಿ ಹೇಳಿ ಇವರು ವಂಚಿಸಿದ್ದಾರೆಂದು ಪೋಲೀಸರು ತಿಳಿಸಿದ್ದಾರೆ.

ಮಹಾ ಕಂಪೆನಿಗಳ ಹೆಸರಲ್ಲಿ ನಕಲಿ ವೆಬ್ ಸೈಟ್ ಮಾಡಿ ವಂಚಿಸುತ್ತಿದ್ದ ಈರ್ವರು ಆರೋಪಿಗಳಲ್ಲಿ ಚೇತನ್ ಎಂಬಿಎ ಪದವೀಧರನಾದರೆ ನೈನಾ ಬಿಟೆಕ್ ಪಧವೀದರೆಯಾಗಿದ್ದಾಳೆ.

ತಮ್ಮ ಕಂಪೆನಿ ಹೆಸರು ಉಪಯೋಗಿಸಿ ಯಾರೋ ವಂಚಿಸುತ್ತಿದ್ದಾರೆಂದು ಕಂಪೆನಿ ಸೈಬರ್ ಕ್ರೈಮ್ ಗೆ ದೂರು ನೀಡಿತ್ತು, ಉದ್ಯೋಗಾರ್ಥಿಗಳಿಗೆ ನೈಜ ಕಂಪೆನಿ ಹಣ ನೀಡಬೇಕಾಗಿ ಬಂದ ಕಾರಣ ಕಂಪೆನಿ ದೂರು ಸಲ್ಲಿಸಿತ್ತು.
ತನಿಖೆ ನಡೆದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ಉದ್ಯೋಗ ಬಯಸಿ ಅರ್ಜಿ ಹಾಕಿದವರ ಮಾಹಿತಿ ಕಲೆ ಹಾಕಿ ಅವರಿಗೆ ಮೇಲ್ ಮತ್ತು ಫನ್ ಮಾಡಿ ಸಂಪರ್ಕಿಸಿ ವಂಚಿಸುತ್ತಿದ್ದರು. ನಕಲಿ ವಿಳಾಸವನ್ನೂ ದಾಖಲಿಸಿದ್ದರಿಂದ ವಂಚನೆಯನ್ನು ಅಷ್ಟು ಸುಲಭದಲ್ಲಿ ಪತ್ತೆ ಹಚ್ಚುವಂತಿರಲಿಲ್ಲ.

2016 ರಲ್ಲಿ ಒಂದೇ ಕಂಪೆನಿಯಲ್ಲಿ ಉದ್ಯೋಗಿಗಳಾಗಿದ್ದ ಇವರು ಈರ್ವರೂ ಸೇರಿ ಒಂದು ಸ್ವಂತ ಕಂಪೆನಿಯೊಂದನ್ನು ತಯಾರಿಸಿದರು. ಅದು ಕೂಡಾ ಅಮೇರಿಕಾದ ಬೃಹತ್ ಕಂಪೆನಿಯೊಂದರ ಹೆಸರಿಗೆ ಹೋಲುವಂತಿತ್ತು.

Leave a Reply