ಮುಂಬೈ: ಮುಂಬೈಯ ದಾದರಾವ್ ಬಿಹೋರ್ ಕಳೆದ ಮೂರು ವರ್ಷಗಳಿಂದ ರಸ್ತೆಯ 500 ಗುಂಡಿಗಳನ್ನು ಮುಚ್ಚಿದ್ದಾರೆ. ಇನ್ನು ಯಾರದೇ ಜೀವ ಹೋಗಬಾರದು, ಇನ್ನು ಯಾವ ತಂದೆಯೂ ಅಳಬಾರದು ಎಂದು ಗುರಿಯಿಟ್ಟುಕೊಂಡು ಅವರು ಈ ಕೆಲಸ ಮಾಡಿದ್ದಾರೆ.

2015ರಲ್ಲಿ ಪುತ್ರ ಪ್ರಕಾಶ್ ಬೈಕ್‍ನಲ್ಲಿ ಹೋಗುತ್ತಿದ್ದಾಗ ಗುಂಡಿಗೆ ಬಿದ್ದು ಸ್ಕಿಡ್ ಆಗಿ ಮೃತ ಪಟ್ಟಿದ್ದರು. ನಂತರ ಪ್ರಕಾಶ್‍ರ ತಂದೆ ದಾದರಾವ್ ಗುಂಡಿ ಮುಚ್ಚು ಕೈಕಂರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ.

ಪುತ್ರನ ಸಾವಿನ ಬಳಿಕ ರಸ್ತೆಯಲ್ಲಿ ಬಿದ್ದು ಇಬ್ಬರು ಮೃತಪಟ್ಟ ವರದಿಗಳು ಅವರ ಗಮನಕ್ಕೆ ಬಂದಾಗ ದಾದರಾವ್ ಗುಂಡಿ ಮುಚ್ಚುವ ನಿರ್ಧಾರಕ್ಕೆ ಬಂದರು. 2015 ಡಿಸೆಂಬರ್‍ನಲ್ಲಿ ಮರೋಲ್ ಮರೇಶಿ ರಸ್ತೆಯ ಗುಂಡಿಗಳನ್ನು ಮುಚ್ಚಿದರು. ಅಪಘಾತವಾಗುವಾಗ ಮಾತ್ರ ಅಧಿಕಾರಿಗಳು ಎಚ್ಚೆತ್ತು ಕೊಳ್ಳುತ್ತಾರೆ. ಆದ್ದರಿಂದ ದಾದರಾವ್ ತಾನೆ ಗುಂಡಿ ಮುಚ್ಚಲು ಹೊರಟರು. ಈ ವರೆಗೆ 500 ಗುಂಡಿಗಳನ್ನು ಮುಚ್ಚಿದ್ದಾರೆ.

ರಸ್ತೆಯ ಕೆಟ್ಟ ಸ್ಥಿತಿಯನ್ನು ಬೆಟ್ಟು ಮಾಡಿ ಕಂಟ್ರಾಕ್ಟರ್ ಮತ್ತು ಬ್ರಹನ್ಮುಂಬೈ ಕಾರ್ಪರೇಷನ್ ವಿರುದ್ಧ ದಾದರಾವ್ ಹೋರಾಟ ನಡೆಸುತ್ತಿದ್ದಾರೆ. ತನ್ನ ಸ್ಥಿತಿ ಇನ್ನು ಯಾವ ತಂದೆಗೂ ಆಗಬಾರದು. ಆದ್ದರಿಂದ ಹೆಚ್ಚೆಚ್ಚು ಮಂದಿ ಮುಂದೆ ಬಂದು ದೇಶದ ರಸ್ತೆಗಳ ಗುಂಡಿ ಮುಚ್ಚುವ ಕೆಲಸದಲ್ಲಿ ತೊಡಗಿಸಿ ಕೊಳ್ಳಬೇಕೆಂದು ಅವರು ಕರೆ ನೀಡಿದ್ದಾರೆ.

Leave a Reply