ಬೀರಬಲ್ ಈ ಹೆಸರು ಕೇಳದವರು ಬಹುಶಃ ಯಾರೂ ಇಲ್ಲ.

ಮೊಘಲ್ ಸಾಮ್ರಾಟ ಅಕ್ಬರ್ ನ ಹೆಸರು ಕೇಳಿದ ತಕ್ಷಣ ನೆನಪಾಗುವ ಇನ್ನೊಂದು ಹೆಸರು ಬೀರಬಲ್.

ಅಕ್ಬರ್ ಆಸ್ಥಾನದಲ್ಲಿ ಪ್ರಮುಖ ಮಂತ್ರಿಯಾಗಿದ್ದ ರಾಜ ಬೀರಬಲ್ ತನ್ನ ತೀಕ್ಷ್ಣ ಬುದ್ಧಿವಂತಿಕೆ, ಜಾಣ್ಮೆಯ ಉತ್ತರಗಳಿಂದ ಹೆಸರುವಾಸಿಯಾಗಿದ್ದರು.

Image result for akbar birbal

ಅಕ್ಬರ್ ಮತ್ತು ಬೀರಬಲ್ ನಡುವೆ ನಡೆದ ಹಲವು ಸಂಭಾಷಣೆಗಳನ್ನು ನಾವು ಇಂದು ಕತೆಗಳ ರೂಪದಲ್ಲಿ ಓದುತ್ತಾ ಇದ್ದೇವೆ.

ಫೆಬ್ರವರಿ 25, 1586 ರಂದು ಯುದ್ಧ ಭೂಮಿಯಲ್ಲಿ 8000 ಸೈನಿಕರೊಂದಿಗೆ ಬೀರಬಲ್ ಹುತಾತ್ಮರಾದರು. ತನ್ನ ಆಪ್ತ ಮಂತ್ರಿ, ಸ್ನೇಹಿತ ಮತ್ತು ಉಪದೇಶಕನಾಗಿದ್ದ ಬೀರಬಲ್ ನನ್ನು ಕಳೆದುಕೊಂಡ ಅಕ್ಬರ್ ದುಃಖ ದಲ್ಲಿ ಎರಡು ದಿನ ಊಟ ಬಿಟ್ಟಿದ್ದನೆಂದು ಇತಿಹಾಸ ಹೇಳುತ್ತದೆ.

ಬೀರಬಲ್ ಕಿರು ಪರಿಚಯ :

Image result for birbal

ಈಗಿನ ಉತ್ತರ ಪ್ರದೇಶದ ಕಲ್ಪಿಯಾ ಹತ್ತಿರ ಇರುವ ಹಳ್ಳಿಯಲ್ಲಿ 1528 ರಲ್ಲಿ ಬೀರಬಲ್ ರವರ ಜನನ .

ಬೀರಬಲ್ ಮೊದಲ ಹೆಸರು ಮಹೇಶ್ ದಾಸ್, ತಂದೆ ಗಂಗಾ ದಾಸ್ ಮತ್ತು ತಾಯಿ ಅಣಬ ದವಿತೋರ. ಬೀರಬಲ್ ಮೂರನೇ ಮಗುವಾಗಿದ್ದರು ಅವರದ್ದು ಹಿಂದೂ ಭಟ್ ಬ್ರಾಹ್ಮಣ ಕುಟುಂಬ ವಾಗಿತ್ತು.

ಅಕ್ಬರ್ ನ ನವರತ್ನ ಗಳು ಎಂದು ಕರೆಯಲ್ಪಡುವ ಒಂಬತ್ತು ಮಂತ್ರಿಗಳಲ್ಲಿ ಬೀರಬಲ್ ಒಬ್ಬರಾಗಿದ್ದರು. ಕ್ರಮೇಣ ತನ್ನ ಚಾತುರ್ಯ ಮತ್ತು ತೀಕ್ಷ್ಣ ಬುದ್ಧಿವಂತಿಕೆಯಿಂದಾಗಿ ಅಕ್ಬರ್‌ನ ಅತ್ಯಂತ ಆಪ್ತ ಗೆಳೆಯರಾದರು.

ಅಲ್ಲದೆ ಧಾರ್ಮಿಕ ಮತ್ತು ಸೇನಾ ಸಲಹೆಗಾರ ಕೂಡ ಆಗಿದ್ದರು. 30 ವರ್ಷಗಳ ಸೇವೆಗಳ ನಂತರ ಅಫ್ಘಾನಿ ಬುಡಕಟ್ಟು ಜನರೊಂದಿಗಿನ ಯುದ್ಧದಲ್ಲಿ ಅವರು ಮೃತರಾದರು.

ರಾಜ ಬೀರಬಲ್ ಎನ್ನುವ ಹೆಸರು ಅಕ್ಬರ್ ನೀಡಿದ ಗೌರವ ನಾಮವಾಗಿತ್ತು.

Leave a Reply