ಮದುವೆ ಅಂದ ಮೇಲೆ ಮೋಜು ಮಸ್ತಿ ಡ್ತಾನ್ಸ್ ಸಾಮಾನ್ಯ. ಆದರೆ ಅದು ಸುತ್ತಮುತ್ತಲಿನವರಿಗೆ ಕಿರುಕುಳ ಆಗಬಾರದು. ಮಕ್ಕಳು ವೃದ್ಧರ ನಿದ್ದೆಗೆ ತೊಂದರೆ ಆಗಬಾರದು. ಕೆಲವರು ಮದುವೆ ಮನೆ ಎಂದು ಕುಡಿದು ಕುಪ್ಪಳಿಸಿ ಮೈಮರೆತು ಕುಣಿಯುತ್ತಾರೆ. ಆದರೆ ಇಲ್ಲಿ ಡಿಜೆ ಆಯೋಜಿಸಿದ ವ್ಯಕ್ತಿಗೇ ನೆರೆದ ಅತಿಥಿಗಳು ಹಲ್ಲೆ ಮಾಡಿದ ಘಟನೆ ನಡೆದಿದೆ.

ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಡಿಜೆ ಹಾಗೂ ಆತನ ಸಹಚರರನ್ನು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ‌.

ರಾತ್ರಿ 10 ಗಂಟೆಯ ನಂತರ ಡಿಜೆ ಮ್ಯೂಸಿಕ್ ನಿಲ್ಲಿಸಿರುವುದೇ ಈ ಅವಾಂತರಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶ ಸರಕಾರದ ನಿಯಮಾವಳಿಗಳ ಪ್ರಕಾರ ರಾತ್ರಿ 10 ಗಂಟೆಯ ನಂತರ ಮ್ಯೂಸಿಕ್ ಹಾಕಲು ನಿರಾಕರಿಸಿದುದರಿಂದ ನೆರೆದಿದ್ದ ಅತಿಥಿಗಳು ಡಿಜೆ ಹಾಗೂ ಆತನ ಸಹಚರರನ್ನು ಥಳಿಸಿದ್ದಾರೆ.

ಸ್ಟೇಜ್ ಮೇಲೆ ಇರಿಸಿದ್ದ ಸೌಂಡ್ ಸಿಸ್ಟಮ್ ಹಾಗೂ ಲೈಟಿಂಗ್ಸ್ ಗಳನ್ನು ಕೂಡ ಅತಿಥಿಗಳು ಮುರಿದು ಹಾಕಿದ್ದಾರೆ.

Leave a Reply