ಜಲಪ್ರಳಯ ಬಾಧಿತ ಕೇರಳದಲ್ಲಿ ದುರಂತ ಪೀಡಿತರನ್ನು ರಕ್ಷಿಸುವ ಸಂದರ್ಭದಲ್ಲಿ ಮಹಿಳೆಯರು ಬೋಟ್ ಹತ್ತಲು ತ್ರಾಸ ಪಡುತ್ತಿರುವಾಗ ತಾನು ನೀರಲ್ಲಿ ಮುಳುಗಿ ಬೆನ್ನು ಬಾಗಿಸಿ ಮಲಗಿ ತನ್ನ ಬೆನ್ನ ಮೇಲೆ ಕಾಲಿಟ್ಟು ಬೋಟು ಹತ್ತಲು ನೆರವಾದ ಮೀನುಗಾರ ಜೈಸಲ್ ರ ವಿಡಿಯೋ ಬಹಳ ವೈರಲ್ ಆಗಿತ್ತು. ಬಳಿಕ ಜೈಸಲ್ ರನ್ನು ದೇಶ ವಿದೇಶಗಳ ಮಾಧ್ಯಮಗಳು ಕೊಂಡಾಡಿದ್ದವು.

ಇದೀಗ ಜೈಸಲ್ ರವರ ಈ ಸೇವೆಗೆ ಅವರಿಗೆ ಹೊಸ ಕಾರು ಗಿಫ್ಟ್ ಸಿಕ್ಕಿದೆ. ಇದೀಗ, ಮಹೀಂದ್ರಾ ಮೋಟರ್ಸ್ನ ಕೇರಳ ಮೂಲದ ವಿತರಕ ಎರಾಮ್ ಮೋಟಾರ್ಸ್ ಜೈಸಲ್ ರಿಗೆ ಬ್ರಾಂಡ್ ನ್ಯೂ ಮಾರ್ರಾಝೋ ಕಾರು ಗಿಫ್ಟ್ ನೀಡಿದ್ದಾರೆ. ಈ ಹೊಸ ಕಾರಿನ ಕೀಲಿ ಕೈಯನ್ನು ಕೇರಳದ ಸಚಿವರಾದ ಟಿ.ಪಿ ರಾಮಕೃಷ್ಣನ್ ಶುಕ್ರವಾರ ಕಂಪೆನಿಯ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಜೈಸಲ್ ರಿಗೆ ಹಸ್ತಾಂತರಿಸಿದರು.

ಮೊಣ ಕಾಲು ಮುಳುಗುವ ತನಕ ಇರುವ ನೀರಿನಲ್ಲಿ ಬಗ್ಗಿ ನಿಂತು ಮಾಡಿದ ಜೈಸಿಲ್ ಸೇವೆ ವಿಸ್ಮಯಕಾರಿ ವಿಡಿಯೋ ಜನರ ಮನಸ್ಸನ್ನು ತುಂಬಾ ನಾಟಿತ್ತು. ಅನೇಕ ಕಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ಸೈನ್ಯದ ಕೊರತೆ ಕಂಡು ಬಂದೆಡೆಗಳಲ್ಲಿ ಮೀನುಗಾರರು ಸ್ವತಹ ಸಿದ್ದರಾಗಿ ಕಾರ್ಯಾಚರಣೆಗೆ ಇಳಿದದ್ದನ್ನೂ ಮಾಧ್ಯಮಗಳು ಪ್ರಶಂಸಿಸಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆಗಾಗಿ ನೌಕಾದಳದ ದೋಣಿಗಳ ಕೊರತೆಯಿದ್ದ ಕಾರಣ, ರಾಜ್ಯದಾದ್ಯಂತದ ಮೀನುಗಾರರು ಒಟ್ಟಾಗಿ ರಕ್ಷಣಾ ಕಾರ್ಯಕ್ಕೆ ಧುಮುಕುವ ತೀರ್ಮಾನ ಕೈಗೊಂಡಿದ್ದರು.

Leave a Reply