ಹಿಂದಿನ ಕಾಲದಲ್ಲಿ ಸಮುದ್ರದ ಅಡಿಯಲ್ಲಿ ಮನೆಗಳು ಇತ್ತಂತೆ ಎಂದು ಅಜ್ಜ ಅಜ್ಜಂದಿರು ನಮಗೆ ಕತೆ ಹೇಳೋರು. ಆದರೆ ಆ ಅಂತೆ ಕಂತೆಗಳಿಗೆಲ್ಲ ಫುಲ್ ಸ್ಟಾಪ್ ನೀವು ನೇರವಾಗಿಯೇ ನಿಮ್ಮ ಕಣ್ಣಾರೆ ನೋಡಿಕೊಳ್ಳಬಹುದು. ಎಲ್ಲಿ ಅಂತೀರಾ ದುಬಾಯ್ ಗೆ ಹೋಗಬೇಕು. ಒಂದು ಸಾಧ್ಯವಿಲ್ಲ ಎಂದಾದರೆ ಇಲ್ಲಿ ವಿಡಿಯೋ ಇದೆ ಅದರಲ್ಲಿ ನೋಡಬಹುದು.

ದುಬಾಯಿಯಲ್ಲಿರುವ ‘ಪಾಮ್ ಜುಮೈರಾ’ ಎಂಬ ಸ್ಥಳದಲ್ಲಿ ಸಮುದ್ರದ ಅಡಿಯಲ್ಲಿ “ದಿ ಫ್ಲೋಟಿಂಗ್ ಸೀ ಹೌಸ್” ಎಂಬ ಬಂಗಳೆಯನ್ನು ನಿರ್ಮಿಸಲಾಗಿದೆ. ಇದರೊಳಗೆ ಅರಮನೆಯಲ್ಲಿ ಇರುವ ಎಲ್ಲ ರೀತಿಯ ಸೌಲಭ್ಯಗಳನ್ನು ನೋಡಿ ಅನುಭವಿಸಬಹುದು.

ಸಮುದ್ರದ ಒಳಗೆ ಯಾವ ರೀತಿ ಮೀನುಗಳು, ಜಲಜೀವಿಗಳು ಸಂಚರಿಸುತ್ತಿವೆ ಎಂಬುದನ್ನು ಕೂಡ ಕಣ್ಣಾರೆ ಕಂಡು ಅನುಭವಿಸಬಹುದು.‌ ಒಟ್ಟಿನಲ್ಲಿ ಅದರೊಳಗೆ ಹೋದವರಿಗಂತು ಇದೇನು ಸ್ವರ್ಗದ ಟ್ರಯಲರ್ ಇರಬಹುದೆ ಎಂದನಿಸುವುದರಲ್ಲಿ ಎರಡು ಮಾತಿಲ್ಲ.

 

Leave a Reply