ಪೂರ್ತಿಯಾಗಿ ಓದುವಿರಿ ಅನ್ನೋ ಭರವಸೆಯಿಂದ ಕಳಿಸಿರುವೆ…..

ಇನ್ನು ಸ್ವಲ್ಪ ದೂರ ಮಾತ್ರ

ಒಂದು ರಶ್ ಆಗಿದ್ದ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಯುವಕಯೊಬ್ಬನ ಹತ್ತಿರ ಕೈ ತುಂಬಾ ಬ್ಯಾಗುಗಳೊಂದಿಗೆ ವೃದ್ಧೆಯೊಬ್ಬಳು ಬಂದು ಕುಳಿತರು.ಆಕೆಯ ಬ್ಯಾಗುಗಳಿಂದಾಗಿ ಆ ಯುವಕನಿಗೆ ಕುಳಿತುಕೊಳ್ಳಲು ಸ್ವಲ್ಪ ಕಷ್ಟವೇ ಆಯಿತು.ಆ ಯುವಕನ ಅವಸ್ಥೆಯನ್ನು ನೋಡಿದ ಪಕ್ಕದಲ್ಲಿ ನಿಂತಿದ್ದ ಒಬ್ಬಾತ ಆ ಯುವಕನ ಹತ್ತಿರ ಕೇಳಿದ – ನೀವು ಯಾಕೆ ಪ್ರತಿಕ್ರಿಯಿಸುತ್ತಿಲ್ಲ? ಆ ವೃದ್ಧೆಗೆ ಬ್ಯಾಗುಗಳನ್ನು ಕೆಳಗಿಡಲು ಯಾಕೆ ಹೇಳುತ್ತಿಲ್ಲ?

ಆಗ ಆ ಯುವಕ ಮುಗುಳ್ನಗುತ್ತಾ ಹೇಳಿದ…”ಇಷ್ಟು ಚಿಕ್ಕ ವಿಷಯಕ್ಕೆ ನಾನೇಕೆ ಪ್ರಾಧಾನ್ಯತೆ ಕೊಡಬೇಕು?ಆಕೆಯ ಜೊತೆ ಚರ್ಚಿಸಬೇಕು?ನಂತರ ಜಗಳ,ಆನಂತರ ಕೋಪ,ಆಮೇಲೆ ದ್ವೇಷ ಹುಟ್ಟಿಕೊಳ್ಳುತ್ತದೆ.ಕೊನೆಗೆ ತಾಳ್ಮೆಯೇ ಕಳೆದುಹೋಗುತ್ತದೆ.ನಾನು ನೆಕ್ಸ್ಟ್ ಸ್ಟಾಪಲ್ಲಿ ಇಳಿಯುತ್ತೇನೆ.ನಾವು ಒಟ್ಟಿಗೆ ಸಾಗುವ ಈ ಪ್ರಯಾಣವು ಇನ್ನು ಸ್ವಲ್ಪ ದೂರ ಮಾತ್ರ.

ಆತ್ಮೀಯರೇ…
ನಿಜವಾಗಿಯೂ ಜೀವನದಲ್ಲಿ ನಾವು ಅಳವಡಿಸಿಕೊಳ್ಳಬೇಕಾದ ಒಂದು ದೊಡ್ಡ ಸಂದೇಶವನ್ನೇ ಆ ಯುವಕ ಹೇಳಿರುವುದು…!

ನಮ್ಮ ಒಟ್ಟಿಗಿನ ಈ ಪ್ರಯಾಣವು ಇನ್ನು ಸ್ವಲ್ಪ ದೂರ ಮಾತ್ರ.

ನಮ್ಮೆಲ್ಲರ ಈ ಜೀವನ ಎಷ್ಟೊಂದು ನಶ್ವರ ಮತ್ತು ಚಿಕ್ಕದು….?

ನಿಮ್ಮ ಹೃದಯವನ್ನು ಯಾರಾದರೂ ನೋಯಿಸಿದ್ದಾರಾ?
ಅವರನ್ನು ಕ್ಷಮಿಸಿ.ಯಾಕೆಂದರೆ – ಒಟ್ಟಿಗಿನ ಈ ಪ್ರಯಾಣ ಇನ್ನು ಸ್ವಲ್ಪ ದೂರ ಮಾತ್ರ.

ನಿಮ್ಮನ್ನು ಯಾರಾದರೂ ಅವಮಾನಿಸಿದರೇ?
ನಿಮಗೆ ಯಾರಾದರೂ ಮೋಸ ಮಾಡಿದರೇ?
ನಿಂದಿಸಿದರೇ?
ಬೇಸರ ಮಾಡಿಕೊಳ್ಳದಿರಿ ಈ ಒಟ್ಟಿಗಿನ ಜೀವನ ಯಾತ್ರೆಯು ಇನ್ನು ಸ್ವಲ್ಪ ದೂರ ಮಾತ್ರ.

ನಿಮ್ಮ ಹತ್ತಿರದ ಸ್ನೇಹಿತರು ಅಥವಾ ಸಂಬಂಧಿಕರಿಂದ ನೀವು ನಿಂದಿಸಲ್ಪಟ್ಟರೆ,ಶಿಕ್ಷಿಸಲ್ಪಟ್ಟರೆ, ಚಿಂತಿಸಬೇಡಿ.
ಅವರೊಟ್ಟಿಗಿನ ಈ ಜೀವನದ ಪಯಣವು *ಇನ್ನು ಸ್ವಲ್ಪ ದೂರ ಮಾತ್ರ.

ಮನಸ್ಸಲ್ಲಿ ಪ್ರೀತಿ, ಸ್ನೇಹ, ಮಾಧುರ್ಯವನ್ನು ತುಂಬಿಕೊಳ್ಳಿ.ಅವು ನಿಮಗೆ ಒಂದು ಅನುಗ್ರಹವಾಗಿವೆ. ಶತ್ರುಗಳಿಗೋ ಅಥವಾ ದ್ವೇಷಿಸುವವರಿಗೋ ಸಿಗದವುಗಳಾಗಿದೆ ಅವು.

ಆದುದರಿಂದ ಇನ್ನುಳಿದ ಕಾಲ ಸಂತೋಷದಿಂದಲೂ, ಸ್ನೇಹದಿಂದಲೂ ಪರೋಪಕಾರದಿಂದಲೂ ಪರಸ್ಪರರನ್ನು ಕ್ಷಮಿಸುತ್ತಾ, ಸಹಿಸುತ್ತಾ ಮುಂದೆ ಸಾಗೋಣ.

ಕೊನೆಯದಾಗಿ…
ಹಿಂತಿರುಗಲಾಗದ,ಯಾವಾಗ, ಯಾರು,ಯಾವ,ಸ್ಟಾಪಲ್ಲಿ ಇಳಿಯುವರು ಎಂದು ಮುಂಚೆಯೇ ಹೇಳಲಾಗದ ಈ ಜೀವನ ಎಂಬ ಪ್ರಯಾಣವು…

ಇನ್ನು ಸ್ವಲ್ಪ ದೂರ ಮಾತ್ರ

Leave a Reply