ಚೆನೈ: ರಾತ್ರಿ ಹತ್ತು ಗಂಟೆಗೆ ಬಂದು ಬಿರಿಯಾನಿ ಕೇಳಿದಾಗ ಮಗಿದಿದೆಯೆಂದು ಹೇಳಿದ್ದಕ್ಕಾಗಿ ಹೋಟೇಲ್ ನೌಕರರ ಮೇಲೆ ಮುಗಿ ಬಿದ್ದು ಹಲ್ಲೆಗೈದ ಘಟನೆ ಚೆನ್ನೈಯಲ್ಲಿ ನಡೆದಿದೆ. ಹಲ್ಲೆಕೋರರು ಡಿಎಂಕೆ ಕಾರ್ಯಕರ್ತರು ಎನ್ನಲಾಗಿದೆ.

ಅನಾರೋಗ್ಯ ಪೀಡಿತರಾದ ಕರುಣಾನಿಧಿಯವರನ್ನು ನೋಡಲು ಬಂದವರು ಈ ಕೃತ್ಯ ನಡೆಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಇವರಿಂದ ಹಲ್ಲೆಗೊಳಗಾದ ಪ್ರಕಾಶ್ ಎಂಬ ವೈಟರ್ ನ ಮುಖಕ್ಕೆ ಐದು ಕಡೆ ಹೊಲಿಗೆ ಹಾಕಲಾಗಿದೆ. ಹಣೆಯಲ್ಲಿ ಮೂರು ಹೊಲಿಗೆಯನ್ನು ಹಾಕಲಾಗಿದೆ.

ಈ ಹಲ್ಲೆಯು ಎರಡು ದಿನ ಹಿಂದೆ ನಡೆದಿದ್ದು ಹಲ್ಲೆ ದೃಶ್ಯಗಳು ಸಿ.ಸಿ ಟಿವಿಯಲ್ಲಿ ದಾಖಲಾಗಿದೆ. ಇದೇ ಆಧಾರದಲ್ಲಿ ತನಿಖೆ ನಡೆದು ಡಿಎಮ್‍ಕೆ ಯುವ ಮೋರ್ಚಾದ ಕಾರ್ಯದರ್ಶಿ ಯುವರಾಜ್ ಸಹಿತ ಐವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಕರುಣಾನಿಧಿಯವರನ್ನು ನೋಡಲು ಬಂದವರು ನಾವೆಂದೂ ನಮಗೆ ಉಚಿತವಾಗಿ ಬಿರಿಯಾನಿ ನೀಡಬೇಕೆಂದು ಕೇಳಿದಾಗ ನೌಕರರು ಬಿರಿಯಾನಿ ಮುಗಿದಿದೆಯೆಂದು ಹೇಳಿದಾಗ ಕುಪಿತರಾದ ಆರೋಪಿಗಳು ನೌಕರರ ಮೇಲೆ ಏಕಾ ಏಕಿ ದಾಳಿ ನಡೆಸಿದ್ದರು.

ಡಿಎಂಕೆ ವರಿಷ್ಠರು ಈ ಪ್ರಕರಣದಲ್ಲಿ ಭಾಗಿಯಾದ ಇಬ್ಬರನ್ನು ಪಕ್ಷದಿಂದ ಸಸ್ಪೆಂಡ್ ಮಾಡಿದ್ದಾರೆ. ಇವರನ್ನು ಕೇವಲ ಸಸ್ಪೆಂಡ್ ಮಾಡಿದರೆ ಸಾಲದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಎಂಕೆಯ ವಕ್ತಾರರು, ಸಸ್ಪೆಂಡ್ ಮೊದಲ ಹಂತದ ಕ್ರಮವೆಂದೂ ಪ್ರಕರಣದ ಬಗ್ಗೆ ಕೂಲಂಕಶವಾಗಿ ಪರಿಶೀಲಿಸಿದ ಬಳಿಕ ಇವರನ್ನು ಪಕ್ಷದಿಂದ ವಜಾ ಮಾಡುವ ಬಗ್ಗೆಯೂ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

Leave a Reply