ಸಿಕ್ಸರ್ ಎಂದರೆ ಕ್ರೀಸ್ ಗೇಲ್, ಗೇಲ್ ಎಂದರೆ ಸಿಕ್ಸರ್ ಹಾಂ.. ಹಾಗಂತ ನಾವು ಹೇಳುತ್ತಿಲ್ಲ ಐಪಿಎಲ್ ಪ್ರೇಮಿಗಳು ಹೇಳುವ ಮಾತು. ಯಾಕೆಂದರೆ ವೆಸ್ಟ್ ಇಂಡಿಸ್ ಮೂಲದ ಈ ದೈತ್ಯ ಮನುಷ್ಯ ಸಿಕ್ಸರ್ ಬಾರಿಸಲು ನಿಂತರೆ ಬೌಲರುಗಳು ಬಳಲಿ ಬೆಂಡಾಗೋದು ಖಚಿತ!!

ಆದರೆ ಈ ಸಲದ ಐಪಿಎಲ್ ಟೂರ್ನಿಯಲ್ಲಿ ಮೊದಲ ಹಾಗೂ ಎರಡನೇ ದಿನ ಗೇಲ್‌ನನ್ನು ಯಾರು ಕ್ಯಾರೇ ಮಾಡಿರಲಿಲ್ಲ. ಕಾರಣ ಕಳೆದ ವರ್ಷ ಆರ್‌ಸಿಬಿಯಲ್ಲಿ ತೋರಿದ ಕಳಪೆ ಪ್ರದರ್ಶನ. ಕೆಲವು ದಿನಗಳ ಹಿಂದೆ ಬಿಗ್ ಬಾಶ್‌ನಲ್ಲಿ ಚೆಂಡುಗಳನ್ನು ಪುಡಿಗೈದು ತಾನಿನ್ನು ಬೌಲರ್‌ಗಳಿಗೆ ಸಿಂಹ ಸ್ವಪ್ನವೇ ಎಂದು ಸಾಬೀತು ಪಡೆಸಿದ್ದರೂ, ಫ್ರಾಂಚೈಸಿಗಳು ಮಾತ್ರ ಗಮನಹರಿಸಲಿಲ್ಲ.

ಕಟ್ಟಕಡೆಯಲ್ಲಿ ಕ್ರಿಸ್ ಗೇಲ್ ಯಾರಿಗೂ ಬೇಡವೆಂದು ತಿಳಿದಾಗ ಎರಡು ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದ್ದು ಮಾತ್ರ ಕಿಂಗ್ಸ್ ಇಲೆವೆನ್ ಪಂಜಾಬ್. ಅದಕ್ಕೆ ಕಾರಣವೂ ಇದೆ. ಈ ಹಿಂದೆ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದ ಗೇಲ್ ಕಳಪೆ ಫಾರ್ಮ್‌ನಿಂದ ಹೊರದಬ್ಬಲ್ಪಟ್ಟು ಆರ್‌ಸಿಬಿ ಪರ ಆಡಿದ್ದರು‌. ಕೊಲ್ಕತ್ತಾದಿಂದ ಹೊರಬಂದು ತಾನು ಎದುರಿಸಿದ ಪ್ರಥಮ ಪಂದ್ಯ ಅದೇ ತಂಡದ ಎದುರಾಗಿತ್ತು. ಆ ಪಂದ್ಯದಲ್ಲಿ ಭರ್ಜರಿ ಸಿಕ್ಸರ್‌ಗಳ ಮಳೆಯನ್ನೇ ಹರಿಸಿ 56 ಎಸೆತಗಳಲ್ಲಿ ‌96ರನ್‍ಗಳನ್ನು ಗಳಿಸಿ ಎಚ್ಚರಿಕೆಯನ್ನು ಕೊಟ್ಟಿದ್ದರು.

ಇದೇ ಆಲೋಚನೆಯನ್ನು ಮುಂದಿಟ್ಟು ಕಿಂಗ್ಸ್ ಇಲೆವೆನ್ ಪಂಜಾಬ್ ಗೇಲ್ ಮೇಲೆ ಸಾಕಷ್ಟು ಭರವಸೆಯನ್ನು ಇಟ್ಟಿದೆ‌. ತನ್ನನ್ನು ಹೊರದಬ್ಬಿದ ತಂಡದ ವಿರುದ್ಧ ಗೇಲ್ ಘರ್ಜಿಸಲಿದ್ದಾರೆ ಭರವಸೆ ಅಭಿಮಾನಿಗಳಲ್ಲೂ ಇದೆ‌. ಆದಾಗ್ಯೂ ಗೇಲ್ ಅವರ ಐಪಿಎಲ್ ಆಟದ ಭವಿಷ್ಯ ಇದೇ ವರ್ಷದಲ್ಲಿ ತೀರ್ಮಾನವೂ ಆಗಲಿದೆ.

Leave a Reply