ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 70ನೇ ಪುಣ್ಯತಿಥಿ ಪ್ರಯುಕ್ತ ದೆಹಲಿಯ ರಾಜಘಾಟ್‌ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಅನೇಕ ಗಣ್ಯರು ಪುಷ್ಪನಮನ ಸಲ್ಲಿಸಿದರು.


ಮಹಾತ್ಮ ಗಾಂಧೀಜಿ ಒಂದು ಪರಿಚಯ

ಮಹಾತ್ಮ ಗಾಂಧೀಜಿ ಯವರ ಪೂರ್ಣ ಹೆಸರು ಮೋಹನದಾಸ ಕರಮಚಂದ್ರ ಗಾಂಧಿ ಇವರು 2 ಅಕ್ಟೌಬರ 1869 ಗುಜರಾತ ರಾಜ್ಯದ ಪೋರ ಬಂದರಿನಲ್ಲಿ ಜನಿಸಿದರು ತಂದೆ ಕರಮಚಂದ್ರ ತಾಯಿ ಪುತಲೀಬಾಯಿ ಗಾಂಧಿ ಎಂಬುದು ಮನೆತನದ ಹೆಸರು ಪ್ರಾಥಮಿಕ ಶಿಕ್ಷಣವನ್ನು ಪೋರ ಬಂದರಿನಲ್ಲಿ ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣವನ್ನು ರಾಜಕೋಟ ಮತ್ತು ಭಾವನಗರದಲ್ಲಿ ಕಲಿತರು.

ಗಾಂಧೀಜಿ 1888 ರಲ್ಲಿ ಬ್ಯಾರಿಸ್ಟರ ವಿದ್ಯಾಭ್ಯಾಸ ಭ್ಯಾರಿಸ್ಟರ ಪದವಿ ಬಂದಿತು ನಂತರ ವಕೀಲ ವೃತ್ತಿ ಆರಂಭಿಸಿದರು. 1893ಕ್ಕೆ ದಕ್ಷಿಣ ಆಫ್ರೀಕಾಕ್ಕೆ ಗಾಂಧೀಜಿ ಬಂದರ,ಅಲ್ಲಿಯ ವರ್ಣನೀತಿಯ ಕಪ್ಪು- ಸುಖ ನೋಡಿಮೂಲ ಭಾರತೀಯರು ಅಲ್ಲಿ ಅನುಭವವಿದೆ ಯಾತನೆ ನೋಡಿ ನ್ಯಾಯ ದೊರಕಿಸಿ ಕೊಟ್ಟರು. ಗಾಂಧೀಜಯನ್ನು ಸುಭಾಷ ಚಂದ್ರ ಬೋಸರು ರಾಷ್ಟ್ತ್ರಪಿತ ಎಂದು ಕರೆದರೆ. ಸರ್ದಾರ ವಲ್ಲಭಭಾಯಿ ಪಟೇಲರು ಬಾಪು ಎಂದು ಕರೆದರು ಗಾಧೀಜಿಯವರ ಎರಡು ಮೂಲ ಮಂತ್ರಗಳು ಸತ್ಯ ಮತ್ತು ಅಹಿಂಸೆ ದಕ್ಷಿಣ ಆಫ್ರೀಕಾದಲ್ಲಿ ಗಾಂಧೀಜಿಯವರಿಗೆ ಕೈಸರ್-ಐ-ಹಿಂದ್ ಜುಲೋ ವಾಕ್ ಮೆಡಲ್ ಮೋಮರ್ ವಾಕ್ ಮೆಡಲ್ ಪ್ರಶಸ್ತಿಗಳು ಸಂಧವು ಸುಧಿರ್ಘವರ್ಷಗಳ ನಂತರ ಭಾರತಕ್ಕೆ 1915 ಮರಳಿದರು.

ಅಹಮದಾಬಾದಿನಲ್ಲಿ ಸತ್ಯಾಗ್ರಹ ಆಶ್ರಮವನ್ನು ಗಾಂಧೀಜಿ 25-5-1915ಕ್ಕೆ ಸ್ಥಾಪಿಸಿದರು. ಸತ್ಯಾಗ್ರಹ ಎಂಬ ಪದವನ್ನು ಮದನ್ ಲಾಲ್ ಗಾಂಧಿಜಿ ಸೂಚಿಸಿದರು. ಭಾರತವು ಸ್ವಾತಂತ್ರ್ಯದಲ್ಲಿರುವದನ್ನು ಕಂಡು ಕೊರಗತೊಡಗಿದರು. ಭಾರತವು ಸ್ವಾತಂತ್ರ್ಯ ಪಡೆಯುವದೆ ಮದ್ದು ಎಂದರಿತರು ತಮ್ಮ ವಕೀಲ ವೃತ್ತಿಯನ್ನು ತ್ಯಜಿಸಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಬಹಳ ನಿರ್ಣಾಯಕ ಪಾತ್ರ ವಹಿಸಿದ್ದರು. ಸ್ವಾತಂತ್ರ್ಯದ ಬಳಿಕ ನಾಥೂರಾಮ್ ಗೋಡ್ಸೆಯಿಂದ ಗಾಂಧೀಜಿಯವರ ಹತ್ಯೆ ಯಾಗಿದೆ.

Leave a Reply