ಬಂದೂಕು ಹಿಂಸೆ ಅಮೇರಿಕಾದಂತಹ ರಾಷ್ಟ್ರದಲ್ಲಿ ಮಾತ್ರ ಅಲ್ಲ ನಮ್ಮ ದೇಶಕ್ಕೂ ಬಂದು ಮುಟ್ಟಿದೆ. ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಪ್ರಕರಣವೊಂದರಲ್ಲಿ ತಾಯಿಯನ್ನು ಮಗೇ ಗುಂಡಿಕ್ಕಿದ ಘಟನೆ ವರದಿಯಾಗಿದೆ.

ಹೂಗ್ಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಲೋಡ್ ಪಿಸ್ತೂಲ್ ನೊಂದಿಗೆ ಆಟವಾಡುತ್ತಿದ್ದ ಹುಡುಗಿ ಆ ವೇಳೆ ತಪ್ಪಿದ ಅವಘಡದಿಂದಾಗಿ ತಾಯಿಯ ಮೇಲೆ ಬಂದೂಕು ಸಿಡಿಸಿದ್ದಾಳೆ.

“ಮನೆಯ ಹೊರಗೆ ಗಾರ್ಡನ್ ನಲ್ಲಿ ಸಿಕ್ಕಿದ ಪಿಸ್ತೂಲನ್ನು
ಆಟಿಕೆಯ ಪಿಸ್ತೂಲ್ ಎಂದು ಭಾವಿಸಿ ತಾಯಿಯೇ ಮಗಳಿಗೆ ಬಂದೂಕು ನೀಡಿದ್ದರು. ಆಟವಾಡುತ್ತಾ ಮಗಳು ತಾಯಿಗೆ ಗುಂಡು ಹಾರಿಸಿದಳು. ಆದರೆ ಅದು ನಿಜವಾದ ಪಿಸ್ತೂಲ್ ಅಗಿತ್ತು” ಎಂದು ಪೊಲೀಸರು ಪ್ರಾಥಮಿಕ ತನಿಖೆಯ ಬಳಿಕ ಹೇಳಿದ್ದಾರೆ. ಮನೆಯ ಹೊರಗೆ ಪಿಸ್ತೂಲ್ ಹೇಗೆ ಬಂತು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಗಾಯಗೊಂಡ ಮಹಿಳೆಯನ್ನು ಅರಾಂಬಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ಸ್ಥಿತಿಯು ಗಂಭೀರವಾಗಿದೆ.

-ಸಾಂದರ್ಭಿಕ ಚಿತ್ರ-

Leave a Reply