ಯೂಟ್ಯೂಬ್ ಇಂದು ಮಾಹಿತಿ ಕಲಿಕೆಯ ದೊಡ್ಡ ಮೂಲವಾಗಿ ಪರಿಣಮಿಸಿದೆ. ಯಾವುದೇ ಆಹಾರ ರೆಸಿಪಿಗಳೂ, ತಂತ್ರಜ್ಞಾನದ ಮಾಹಿತಿಗಳು ಅದರಲ್ಲಿ ದೊರೆಯುತ್ತವೆ. ಇತ್ತೀಚೆಗೆ ಯೂಟ್ಯೂಬ್ ನೋಡಿ ಸಿವಿಲ್ ಸರ್ವಿಸ್ ಪರೀಕ್ಷೆ ಬರೆದು ರ‌್ಯಾಂಕ್ ಪಡೆದ ಸುದ್ದಿಯೂ ವೈರಲ್ ಆಗಿತ್ತು.

ಇದೀಗ ಉಡುಪಿಯು ಜಿಲ್ಲೆ ಪಿತ್ರೋಡಿಯ ಉದಯ್ ಕುಮಾರ್ ಹಾಗೂ ಸಂಧ್ಯಾ ದಂಪತಿಯ ಪುತ್ರಿ ತನುಶ್ರೀ ಯೂಟೂಬ್ ನೋಡಿ ಯೋಗ ಕಲಿತು ಹೊಸ ದಾಖಲೆ ಬರೆದಿದ್ದಾಳೆ.
ಯೋಗಾಸನದ ನಿರಾಲಂಬ ಪೂರ್ಣ ಚಕ್ರಾಸನವನ್ನು ಒಂದು ನಿಮಿಷದಲ್ಲಿ 42 ಬಾರಿ ಮಾಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾಳೆ.

ಮುಂಬೈಯಿಂದ ಆಗಮಿಸಿದ್ದ ಗಿನ್ನೆಸ್ ಅಧಿಕಾರಿ ಮುಂದೆ ತನುಶ್ರೀ ವಿಶ್ವ ದಾಖಲೆ ಯೋಗ ಮಾಡಿದ್ದು, ಪ್ಯಾಲೆಸ್ತೀನ್‍ನ ಮುಹಮ್ಮದ್ ಅಲ್ ಶೇಖ್ ಹೆಸರಲ್ಲಿದ್ದ ದಾಖಲೆಯನ್ನು ಮುರಿದಿದ್ದಾಳೆ.

ತನುಶ್ರೀ ಒಂದೇ ಒಂದು ದಿನವೂ ಯೋಗ ತರಗತಿಗೆ ಹೋಗಿಲ್ಲ. ಕೇವಲ ಯೂಟ್ಯೂಬ್ ನೋಡಿ ಎಲ್ಲಾ ಆಸನಗಳನ್ನು ಕಲಿತಿದ್ದಾಳೆ. ಅವಳ ಈ ಸಾಧನೆಯಿಂದ ಬಹಳ ಖುಷಿಯಾಗಿದೆ ಎಂದು ತನುಶ್ರೀ ತಂದೆ ಉದಯ ಕುಮಾರ್ ಹೇಳಿದ್ದಾರೆ.

Leave a Reply