ಮದುಮಗ ಬಿಳಿ ಕುದುರೆಯಲ್ಲಿ ಅಥವಾ ಕೆಂಪು ಕಾರಿನಲ್ಲಿ ಬರುವ ಕಾಲ ಮುಗಿಯಿತು.

ಈಗ ಎಲ್ಲದರಲ್ಲೂ ವಿಶೇಷತೆ ಹುಡುಕುವ ಜನರು ಇದೀಗ ಮದುಮಗನ ಮಂಟಪ ಪ್ರವೇಶದಲ್ಲೂ ವಿಚಿತ್ರ ಸರ್ಕಸ್ ಮಾಡ್ತಾರೆ.

ಪಾಕಿಸ್ತಾನದಲ್ಲಿ ಮದುವೆ ಗಂಡು WWE ಯಲ್ಲಿ ಅಂಡರ್ ಟೇಕರ್ ಪ್ರವೇಶ ಮಾಡುವ ತರಹ ಮಂಟಪಕ್ಕೆ ಪ್ರವೇಶ ಮಾಡಿದ್ದಾನೆ. ಇದರ ವಿಡಿಯೋ ವೈರಲ್ ಆಗಿದೆ.
ಬಹುಶಃ ಮದುವೆ ಎಂದರೆ ರೆಸ್ಲಿಂಗ್ ಕುಸ್ತಿ ಎಂದು ಭಾವಿಸಿದ್ದಾನೋ ಏನೋ?

 

ಹಿಂದೊಮ್ಮೆ ಇದೆ ರೀತಿಯಲ್ಲಿ ಮದುವೆ ಗಂಡು WWE ಯಾ ಖ್ಯಾತ ಆಟಗಾರ ಟ್ರಿಪ್ಪಲ್ ಹೆಚ್ ರೀತಿಯಲ್ಲಿ ಪ್ರವೇಶ ಮಾಡಿದ ವಿಡಿಯೋ ನೋಡಿ ಸ್ವತಃ ಟ್ರಿಪ್ಪಲ್ ಎಚ್ “ಹನಿಮೂನ್ ಯಾವ ರೀತಿ ಇರಬಹುದು” ಎಂದು ಟ್ವೀಟ್ ಮಾಡಿದ್ದರು.

 

ಇತ್ತೀಚೆಗೆ ಕೇರಳದಲ್ಲಿ ಮದುಮಗನೊಬ್ಬ ಕ್ರಿಕೆಟ್ ಬ್ಯಾಟ್, ಹೆಲ್ಮೆಟ್ ಎಲ್ಲಾ ಹಾಕಿ ಬ್ಯಾಟಿಂಗ್ ಮಾಡಲು ಬಂದಂತೆ ಬಂದಿದ್ದು ವೈರಲ್ ಆಗಿತ್ತು.

 

 

Leave a Reply