ಕೆಲವೊಮ್ಮೆ ಫ್ಯಾಷನ್ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿ ನಡೆದಾಗ ಯಾವ ರೀತಿ ಪ್ರತಿಕ್ರಿಯೆಗಳು ಬರುತ್ತವೆ ಎಂಬುದಕ್ಕೆ ಗುಚ್ಚೀ ಬ್ರ್ಯಾಂಡ್ ಇದೀಗ ಉತ್ತಮ ಉದಾಹರಣೆಯಾಗಿದೆ.

ಇಟಲಿಯ ಪ್ರಸಿದ್ಧ ಬ್ರ್ಯಾಂಡ್ ಆದ ಗುಚ್ಚೀ ನಡೆಸಿದ ಮಿಲನ್ ಫ್ಯಾಷನ್ ವೀಕ್ ನಲ್ಲಿ ಬಿಳಿಯ ಮಾಡೆಲ್ ಗೆ ಪೇಟವನ್ನು ತೊಡಿಸಿರುವುದು ಸಿಖ್ಖರಿಂದ ಟ್ವಿಟರ್ ನಲ್ಲಿ ಭಾರೀ ಖಂಡನೆಗೊಳಗಾಗಿದೆ.

ಟ್ವಿಟ್ಟರ್ ಬಳಕೆದಾರರೊಬ್ಬರು ನಿಮಗೆ ಕಂದು ಮಾಡೆಲ್ ಸಿಗಲಿಲ್ಲವೇ? ಎಂದರೆ ಇನ್ನೊಬ್ಬರು ಸಿಖ್ ಮಾಡೆಲ್ ಖರೀದಿಸುವ ಬದಲು ಸುಮ್ಮನೆ ಬಿಳಿಯ ಮಾಡೆಲ್ ಮೇಲೆ ಪೇಟವನ್ನು ತೊಡಿಸಿದೆ ಎಂದರು.

ಪೇಟವು ಫ್ಯಾಷನಿನ ವಸ್ತುವಲ್ಲ ಅದಕ್ಕೆ ಅದರದ್ದೇ ಆದ ಗೌರವವಿದೆ ಎಂದು ಖಂಡಿಸಿದ್ದಾರೆ.

Leave a Reply