ಅಹ್ಮದಾಬಾದ್ : ಅನೈತಿಕ ಸಂಬಂಧವು ಕೊನೆಗೆ ಭಯಾನಕ ಅಂತ್ಯವನ್ನು ಕಾಣುತ್ತದೆ ಎಂಬುದನ್ನು ನಾವು ಆಗಾಗ ನೋಡುತ್ತೇವೆ.ಎರಡು ಮಕ್ಕಳ ತಾಯಿ ಅಕ್ರಮ ಸಂಬಂಧವಿಟ್ಟು ಕೊಂಡವನೊಂದಿಗೆ ಮದುವೆಯಾಗಲಿಕ್ಕಾಗಿ ಗಂಡನನ್ನೇ ಕೊಲೆ ಮಾಡಿಸಿದ್ದಾಳೆ. ಆದರೆ ಕೊನೆಗೆ ಆಕೆ ಮತ್ತು ಆಕೆಯ ಪ್ರಿಯಕರ ಕಂಬಿಯ ಹಿಂದೆ ಇದ್ದಾರೆ.

ಗುಜರಾತಿನ ಸೋಲಾ ಜಗತ್ಪುರದಲ್ಲಿ ಈ ಘಟನೆ ನಡೆದಿದ್ದು, ಶಿಲ್ಪಾ ಎಂಬ ಪತ್ನಿಯೇ ಪತಿಯನ್ನು ಕೊಲೆ ಮಾಡಿಸಿದ್ದಾಳೆ. 40 ವರ್ಷ ಪ್ರಾಯದ ಪತಿ ದಿಲೀಪ್ ನನ್ನು ಕತ್ತು ಸೀಳಿ ಕೊಲೆಗೈಯಲಾಗಿತ್ತು. ಕೊಲೆಯ ಸಂಚಿನ ಬೆನ್ನು ಹತ್ತಿದ ಪೊಲೀಸರು ಕೊಲೆಗಾರರನ್ನು ಬಯಲಿಗೆಳೆಯುವಲ್ಲಿ ಯಶಸ್ವಿ ಆಗಿದ್ದಾರೆ.

ಪತ್ನಿ ಶಿಲ್ಪಾಳಿಗೆ ಬಾಪು ನಗರದ ಗೋಪಾಲ್ ನೊಂದಿಗೆ ಕಳೆದ ಎರಡು ವರ್ಷಗಳಿಂದ ಅಕ್ರಮ ಸಂಬಂಧ ಇತ್ತು. ಪತಿಯನ್ನು ಕೊಂದರೆ ನಿನ್ನನ್ನು ಮದುವೆ ಆಗುತ್ತೇನೆಂದು ಆಕೆ ಹೇಳಿದ್ದಳು. ಆದರೆ ಗೋಪಾಲ್ ಇದಕ್ಕೆ ನಿರಾಕರಿಸಿದ್ದನು‌ ಬಳಿಕ ಆಕೆ ತನ್ನ ಸಂಬಂಧಿ ಹರೀಶ್ ನ ಜೊತೆ ಸಂಬಂಧ ಬೆಳೆಸಿ ಪತಿಯನ್ನು ಕೊಂದರೆ ನಿನ್ನನ್ನು ಮದುವೆಯಾಗುತ್ತೇನೆ ಎಂದು ಆಮಿಷ ಒಡ್ಡಿದ್ದಳು. ಶಿಲ್ಪಾಳ ಮಾತಿಗೆ ಮರುಳಾದ ಹರೀಶ್ ಆಕೆಯ ಪತಿ ದಿಲೀಪ್ ನನ್ನು ದೂರದ ಸ್ಥಳಕ್ಕೆ ಕರೆದು ಕೊಂಡು ಹೋಗಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಪೊಲೀಸರು ಶಿಲ್ಪಾ ಮತ್ತು ಹರೀಶನನ್ನು ಬಂಧಿಸಿದ್ದಾರೆ.

ಶಿಲ್ಪಾಳಿಗೆ 17 ಮತ್ತು 14 ವರ್ಷದ ಹೆಣ್ಣು ಮಕ್ಕಳಿದ್ದಾರೆ. ತಾಯಿಯ ಅನೈತಿಕ ಸಂಬಂಧದಿಂದ ಅಮಾಯಕ ಹೆಣ್ಣು ಮಕ್ಕಳು ಅನಾಥವಾಗಿದ್ದಾರೆ.

Leave a Reply