ಗುಜರಾತ್ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆ ಫಲಿತಾಂಶಗಳು ಪ್ರಕಟವಾಗಿದೆ.

ಬಿಜೆಪಿಯು 75 ಸೀಟುಗಳ ಪೈಕಿ 44 ಪುರಸಭಾ ಕ್ಷೇತ್ರಗಳನ್ನು ಗೆದ್ದಿದ್ದು, ಅದರ ಪ್ರತಿಸ್ಪರ್ಧಿ ಕಾಂಗ್ರೆಸ್ 13 ಗೆದ್ದಿದೆ. 28 ಜಿಲ್ಲೆಗಳನ್ನು ಒಳಗೊಂಡ ಚುನಾವಣೆಯಲ್ಲಿ 64.4 ರಷ್ಟು ಮತದಾನ ನಡೆದಿದೆ.

Image result for gujarat municipal poll election result 2018

ಕಳೆದ ಬಾರಿ 59 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿ 47 ಕಡೆ ಜಯಗಳಿಸಿದರೂ 12 ಸ್ಥಾನಗಳನ್ನು ಕಳಕೊಂಡಿದೆ. ಕಳೆದ ಬಾರಿ 13 ಕಡೆ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಈ ಬಾರಿ 16 ಕಡೆ ಗೆದ್ದಿದೆ.

ಉಳಿದ ಕಡೆ, ಎನ್’ಸಿಪಿ-1, ಬಿಎಸ್ಪಿ-1, ಹಾಗೂ 6 ಕಡೆ ಯಾರಿಗೂ ಬಹುಮತ ಸಿಕ್ಕಿಲ್ಲವೆಂದು ಚುನಾವಣಾ ಆಯುಕ್ತರು ತಿಳಿಸಿದ್ದಾರೆ.

ಕಳೆದ ಫೆ.17ರಂದು ಗುಜರಾತ್ ರಾಜ್ಯದ್ಯಂತ ಸ್ಥಳೀಯಾಡಳಿತ ಸಂಸ್ಥೆಗಳಿಗೆ, 2 ಜಿಲ್ಲಾ ಪಂಚಾಯತ್, 17 ತಾಲ್ಲೂಕು ಹಾಗೂ 1400 ಗ್ರಾಮ ಪಂಚಾಯತ್’ಗಳಿಗೆ ಚುನಾವಣೆ ನಡೆದಿತ್ತು.

ಡಿಸೆಂಬರ್‌ನಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯ ನಂತರ ಈ ಮುನಿಸಿಪಲ್ ಚುನಾವಣೆಗಳು ಬಿಜೆಪಿ ಮತ್ತು ಕಾಂಗ್ರೆಸ್‌ ಪಾಲಿಗೆ ಬಹುಮುಖ್ಯವಾಗಿತ್ತು.

Leave a Reply