ಮಕ್ಕ: ಹಾಜಿಗಳು ಬರುವುದು ಹೆಚ್ಚಳವಾಗಿದ್ದು ಕಅಬಾಕ್ಕೆ ಹೊದಿಸಲಾದ ಬಟ್ಟೆ ಕಿಸ್ವಾವನ್ನು ಎತ್ತಿ ಕಟ್ಟಲಾಗಿದೆ. ಹಾಜಿಗಳು ಹಿಡಿದೆಳೆಯುವುದರಿಂದ ಅದಕ್ಕೆ ಹಾನಿಯಾಗಬಾರದು ಎನ್ನುವ ಉದ್ದೇಶದಿಂದ ಕಿಸ್ವಾವನ್ನು ಎತ್ತಿ ಕಟ್ಟಲಾಗಿದೆ. ಹಜ್ ವಿಧಿವಿಧಾನ ಪೂರ್ಣಗೊಂಡ ನಂತರ ಕಅಬಾದ ಬಟ್ಟೆಯನ್ನು ಅರ್ಥಾತ್ ಕಿಸ್ವಾವನ್ನು ಪುನಃ ಹೊದಿಸಲಾಗುವುದು.

ಹಜ್ ಸಿದ್ಧತೆಗಳಲ್ಲಿ ಪವಿತ್ರ ಕಅಬಾ ಭವನಕ್ಕೆ ಹೊದಿಸಲಾಗುವ ಕಿಸ್ವಾವವನ್ನು ಹರಂ ಕಾರ್ಯ ಇಲಾಖೆ ಮೇಲಕ್ಕೆತ್ತುವ ಪ್ರಕ್ರಿಯೆಯನ್ನು ಕೈಗೊಂಡಿದೆ. ಇಲ್ಲಿ ಬಿಳಿ ಬಟ್ಟೆಯನ್ನು ಎರಡು ಮೀಟರ್ ಎತ್ತರದಲ್ಲಿ ಹೊದೆಯಲಾಗಿದೆ. ಹಾಜಿಗಳ ರಶ್ಶು ಹೆಚ್ಚಿದಂತೆ ಸಾಮಾನ್ಯವಾಗಿ ಈ ರೀತಿ ಮಾಡಲಾಗುತ್ತದೆ.

ಪ್ರಯಾಣಿಕರ ಎಳೆದಾಟ ನಡೆದರೆ ಕಿಸ್ವಾಕ್ಕೆ ಹಾನಿಯಾಗುತ್ತದೆ. ಕಿಸ್ವಾವನ್ನು ಸಂರಕ್ಷಿಸುವುದಕ್ಕಾಗಿ ಅದನ್ನು ಮೇಲೆತ್ತಿ ಕಟ್ಟಲಾಗುತ್ತದೆ. ಹರಂ ಕಾರ್ಯ ಇಲಾಖೆ ಮತ್ತು ಕಿಸ್ವಾ ನಿರ್ಮಾಣ ಪ್ಯಾಕ್ಟರಿಯ 30ರಷ್ಟು ಕಾರ್ಮಿಕರು ಕಿಸ್ವಾವನ್ನು ಮೇಲೆತ್ತಿಕಟ್ಟಿದ್ದು ಮೂರು ಗಂಟೆಗಳ ಸಮಯ ಇದಕ್ಕೆ ಹಿಡಿದಿದೆ.

ಹಾಜಿಗಳು ಅರಫಾದಲ್ಲಿ ಸೇರುವ ದುಲ್‍ಹಜ್ ಒಂಬತ್ತಕ್ಕೆ ಕಅಬದ ಹೊಸ ಕಿಸ್ವಾ ಹೊದಿಸಲಾಗುವುದು. ಆದರೆ ಹಾಜಿಗಳು ಮರಳಿ ಹೋಗುವವರೆಗೆ ಕಿಸ್ವಾವನ್ನು ಕೆಳಗಿಳಿಸಿ ಕಟ್ಟಲಾಗುವುದಿಲ್ಲ.

ತಪ್ಪಾದ ವಿಶ್ವಾಸದಲ್ಲಿ ಕೆಲವು ಹಾಜಿಗಳು ಕಿಸ್ವಾದ ನೂಲನ್ನು ಕೀಳುತ್ತಾರೆ ಎಂದು ಕಿಸ್ವಾ ಫ್ಯಾಕ್ಟರಿ ನಿರ್ದೇಶಕ ಜನರಲ್ ಅಹಮ್ಮದ್ ಅಲ್ ಮನ್ಸೂರಿ ಹೇಳಿದರು. ಅಂಧ ವಿಶ್ವಾಸಗಳು ತಡೆಯುವ ಅಂಗವಾಗಿ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಹಜ್‍ನ ಎಲ್ಲ ಸಿದ್ಧತೆಗಳು ಈಗಾಗಲೇ ಸರಿಯಾದ ಸಮಯಕ್ಕೆ ಮಾಡಿ ಮುಗಿದಿದೆ ಎಂದು ಅವರು ತಿಳಿಸಿದರು.

Leave a Reply