ಸಾಂದರ್ಭಿಕ ಚಿತ್ರ

ತನ್ನನ್ನು ಹಾವು ಕಚ್ಚಿದ್ದಕ್ಕಾಗಿ ರೋಷಗೊಂಡು ವ್ಯಕ್ತಿಯೊಬ್ಬ ಹಾವಿನ ತಲೆಯನ್ನೇ ಕಚ್ಚಿ ಬಾಯಿಯಲ್ಲಿ ಜಜ್ಜಿದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಸೋನಲಾಲ್ ಎಂಬ ವ್ಯಕ್ತಿ, ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆತನನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಯಿತು.

ಆದರೆ ವೈದ್ಯರಿಗೆ ಆತನ ದೇಹದಲ್ಲಿ ಹಾವಿನ ಯಾವುದೇ ಕಚ್ಚುವಿಕೆಯ ಗುರುತುಗಳನ್ನು ಕಾಣಲು ಸಾಧ್ಯವಾಗಲಿಲ್ಲ.

ಸಾಂದರ್ಭಿಕ ಚಿತ್ರ

ರೈತನಾಗಿರುವ ಸೋನಲಾಲ್ ನನ್ನು 7 ಗಂಟೆಗೆ ತುರ್ತಾಗಿ ಆಂಬುಲೆನ್ಸ್ ಮೂಲಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು ಎಂದು ವೈದ್ಯಕೀಯ ಅಧಿಕಾರಿ ಡಾ. ಮಹೇಂದ್ರ ವರ್ಮಾ ಹೇಳಿದರು.

ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಸೋನಲಾಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply